Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಟ್ರೆಂಟ್ ಬ್ರಿಡ್ಜ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲ ಇನಿಂಗ್ಸ್ ನಲ್ಲಿ ಶತಕ ಗಳಿಸಲು ಸಾಧ್ಯವಾಗದೇ ಇದ್ದ ನಿರಾಶೆಯನ್ನು ದ್ವಿತೀಯ ಇನಿಂಗ್ಸ್ ನಲ್ಲಿ ಶತಕ ಗಳಿಸಿ ಪೂರ್ತಿಗೊಳಿಸಿದರು.
ಅವರ ಈ ಅದ್ಭುತ ಇನಿಂಗ್ಸ್ ನೋಡಿ ಇಂಗ್ಲೆಂಡ್ ಸಹಾಯಕ ಕೋಚ್ ಪಾಲ್ ಫಾರ್ ಬ್ರೇಸ್ ದಂಗಾಗಿ ಹೋಗಿದ್ದಾರೆ. ಇಂತಹ ಛಲವುಳ್ಳ ಆಟಗಾರನ ನೋಡಿ ಇಂಗ್ಲೆಂಡ್ ಆಟಗಾರರು ಪಾಠ ಕಲಿಯಬೇಕಿದೆ ಎಂದು ಪಾಲ್ ಅಭಿಪ್ರಾಯಪಟ್ಟಿದ್ದಾರೆ.
‘ಆತನ ಶ್ರೇಷ್ಠತೆ ಬಗ್ಗೆ ಎಷ್ಟೇ ಚರ್ಚೆಗಳು ನಡೆಯಬಹುದು. ಆದರೆ ಆತ ಬೆಳೆದು ಬಂದ ರೀತಿ, ಈ ಸರಣಿಯಲ್ಲಿ ಸುಧಾರಣೆ ಕಾಣುತ್ತಾ ಹೋದ ರೀತಿ, ತಾಂತ್ರಿಕತೆ ಎಲ್ಲದರಿಂದ ನಾವು ಪಾಠ ಕಲಿಯಬೇಕಿದೆ’ ಎಂದು ಪಾಲ್ ಟೀಂ ಇಂಡಿಯಾ ನಾಯಕನನ್ನು ಹೊಗಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.