Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮೊಹಾಲಿ: 100 ನೇ ಟೆಸ್ಟ್ ಪಂದ್ಯವಾಡುವುದು ಯಾವುದೇ ಆಟಗಾರನಿಗೂ ವಿಶೇಷ ಕ್ಷಣ. ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಈಗ ಅದೇ ಮೈಲಿಗಲ್ಲಿನ ಹೊಸ್ತಿಲಲ್ಲಿದ್ದಾರೆ.
ನಾಳೆಯಿಂದ ಆರಂಭವಾಗಲಿರುವ ಭಾರತ-ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಕೊಹ್ಲಿ ಪಾಲಿಗೆ 100 ನೇ ಟೆಸ್ಟ್ ಪಂದ್ಯ. ಈ ಮೈಲಿಗಲ್ಲಿನ ಪಂದ್ಯವಾಡುತ್ತಿರುವ ಕೊಹ್ಲಿಗೆ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡುಲ್ಕರ್, ವಿವಿಎಸ್ ಲಕ್ಷ್ಮಣ್ ಸೇರಿದಂತೆ ಬಹುತೇಕರು ಶುಭ ಹಾರೈಸಿದ್ದಾರೆ.
ಸ್ವತಃ ಕೊಹ್ಲಿ 100 ನೇ ಟೆಸ್ಟ್ ಆಡುತ್ತಿರುವ ಬಗ್ಗೆ ಮಾತನಾಡಿದ್ದಾರೆ. 100 ನೇ ಟೆಸ್ಟ್ ಆಡುತ್ತೇನೆಂದು ಎಂದೂ ಯೋಚಿಸಿರಲಿಲ್ಲ. ಟೆಸ್ಟ್ ಕ್ರಿಕೆಟ್ ಅತ್ಯಂತ ಆಸಕ್ತಿದಾಯಕವಾದದ್ದು. ಅದರ ರುಚಿ ನೋಡಿದವರಿಗೇ ಅದು ಇಷ್ಟವಾಗುತ್ತದೆ. ಪ್ರಥಮ ದರ್ಜೆ ಕ್ರಿಕೆಟ್ ನಲ್ಲೇ ದೊಡ್ಡ ದೊಡ್ಡ ಇನಿಂಗ್ಸ್ ಆಡಿ ಬಂದಿದ್ದೆ. ಹೀಗಾಗಿ ಕ್ರೀಸ್ ನಲ್ಲಿ ಹೆಚ್ಚು ಹೊತ್ತು ಇರಬೇಕು ಎಂಬುದು ನನ್ನ ಪಾಲಿಸಿಯಾಗಿತ್ತು. ನಾನು 100 ನೇ ಟೆಸ್ಟ್ ಆಡುತ್ತಿರುವುದು ನನ್ನ ಕೋಚ್, ಕುಟುಂಬದವರಿಗೆ ಖುಷಿ ನೀಡಿದೆ. ಇದು ದೇವರ ಕೃಪೆ ಎಂದಿದ್ದಾರೆ.