ಎಡ್ಜ್ ಬಾಸ್ಟನ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಮರಳಿ ಹಳಿಗೆ ತಂದಿದ್ದು ವಿರಾಟ್ ಕೊಹ್ಲಿ ಎಂದೇ ಎಲ್ಲರೂ ಅಂದುಕೊಂಡಿದ್ದಾರೆ.
ಆದರೆ ಇಂಗ್ಲೆಂಡ್ ಮಾಜಿ ನಾಯಕ ನಾಸಿರ್ ಹುಸೇನ್ ಪ್ರಕಾರ ಈ ಸೋಲಿಗೂ ಕೊಹ್ಲಿಯೇ ಕಾರಣವಂತೆ! ಬ್ಯಾಟಿಂಗ್ ನಲ್ಲಿ ಜವಾಬ್ಧಾರಿ ತೆಗೆದುಕೊಂಡು ಕೊಹ್ಲಿ ಏಕಾಂಗಿಯಾಗಿ ತಂಡವನ್ನು ದಡದ ಸಮೀಪ ತಂದರು. ಆದರೆ ನಾಯಕತ್ವದಲ್ಲಿ ಸೋತರು ಎಂದು ನಾಸಿರ್ ಹುಸೇನ್ ಅಭಿಪ್ರಾಯಪಟ್ಟಿದ್ದಾರೆ.
ಇಂಗ್ಲೆಂಡ್ 87 ರನ್ ಗೆ 7 ವಿಕೆಟ್ ಕಳೆದುಕೊಂಡಿದ್ದಾಗ ರವಿಚಂದ್ರನ್ ಅಶ್ವಿನ್ ರನ್ನು ದಾಳಿಗೆ ಇಳಿಸಬೇಕಿತ್ತು. ಆದರೆ ಅಶ್ವಿನ್ ಆ ಸಂದರ್ಭದಲ್ಲಿ ಸುಮಾರು ಒಂದು ಗಂಟೆ ಕಾಲ ಮೈದಾನದಲ್ಲೇ ಇರಲಿಲ್ಲ. ಇದು ಕೊಹ್ಲಿಯ ಯೋಜನೆಯ ವೈಫಲ್ಯ. ಇದರಿಂದಾಗಿಯೇ ಸ್ಯಾಮ್ ಕ್ಯುರೇನ್, ಆದಿಲ್ ರಶೀದ್ ಭರ್ಜರಿಯಾಗಿ ಆಡಿದರು’ ಎಂದು ನಾಸಿರ್ ಹುಸೇನ್ ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.