Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಲಾರ್ಡ್ಸ್: ಇಂಗ್ಲೆಂಡ್ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಹೀನಾಯವಾಗಿ ಸೋತ ಬಳಿಕ ಟೀಂ ಇಂಡಿಯಾದಲ್ಲಿ ಇನ್ನೊಂದು ಆತಂಕದ ಕಾರ್ಮೋಡ ಕವಿದಿದೆ.
ಪ್ರಶಸ್ತಿ ಸಮಾರೋಪ ಸಮಾರಂಭದಲ್ಲಿ ಸ್ವತಃ ವಿರಾಟ್ ಕೊಹ್ಲಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಈ ಪಂದ್ಯದಲ್ಲಿ ಅಷ್ಟೊಂದು ಉತ್ತಮ ಇನಿಂಗ್ಸ್ ಆಡದ ಕೊಹ್ಲಿ ತಮ್ಮ ಬೆನ್ನು ನೋವಿನ ಸಮಸ್ಯೆ ಮತ್ತೆ ಕಾಣಿಸಿಕೊಂಡಿದೆ ಎನ್ನುವ ಮೂಲಕ ಗಾಯದ ಮೇಲೆ ಬರೆ ಎಳೆದಿದ್ದಾರೆ.
ಈಗಾಗಲೇ ಮಂಕು ಕವಿದಿರುವ ಟೀಂ ಇಂಡಿಯಾಗೆ ಕೊಹ್ಲಿಯ ಗಾಯದ ಚಿಂತೆ ಮತ್ತಷ್ಟು ಧೃತಿಗೆಡಿಸಲಿದೆ. ವಿಪರೀತ ಕೆಲಸದೊತ್ತಡದಿಂದ ನನಗೆ ಮತ್ತೆ ಬೆನ್ನು ನೋವು ಕಾಣಿಸಿಕೊಳ್ಳುತ್ತಿದೆ. ಮುಂದಿನ ಐದು ದಿನಗಳಲ್ಲಿ ಚೇತರಿಸಿಕೊಳ್ಳಬಹುದು ಎಂಬ ವಿಶ್ವಾಸವನ್ನು ಕೊಹ್ಲಿ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಕೊಹ್ಲಿ ಬೆನ್ನು ನೋವಿನ ಕಾರಣಕ್ಕೆ ಹೊರಗುಳಿಯುವಂತಾದರೆ ಟೀಂ ಇಂಡಿಯಾದ ಗತಿ ಎ ದರ್ಜೆ ತಂಡಕ್ಕಿಂತ ಕಡೆಯಾಗುವುದು ನಿಶ್ವಿತ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.