Publish Date: Mon, 06 Sep 2021 (09:38 IST)
Updated Date: Mon, 06 Sep 2021 (09:48 IST)
ಲಂಡನ್: ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ ನಲ್ಲಿ 46 ರನ್ ಗಳಿಸಿದ್ದಾಗ ದುರದೃಷ್ಟವಶಾತ್ ಔಟಾದ ವಿರಾಟ್ ಕೊಹ್ಲಿ ತಮ್ಮ ಕೋಪ ಪ್ರದರ್ಶಿಸಿದ್ದಾರೆ.
ಔಟಾದ ಬಳಿಕ ಪೆವಿಲಿಯನ್ ಗೆ ತೆರಳಿದ ಕೊಹ್ಲಿ ಸಿಟ್ಟಿನಲ್ಲಿ ತಮ್ಮ ಬಲಗೈಯನ್ನು ಗೋಡೆಗೆ ಗುದ್ದಿ ಕೋಪ ತೀರಿಸಿಕೊಂಡಿದ್ದಾರೆ. ಮೊದಲ ಇನಿಂಗ್ಸ್ ನಲ್ಲಿ ಕೊಹ್ಲಿ ಅರ್ಧಶತಕ ಸಿಡಿಸಿದ್ದರು.
ಕಳೆದ ಎರಡು ವರ್ಷಗಳಿಂದ ಕೊಹ್ಲಿ ಒಂದೇ ಒಂದು ಶತಕ ದಾಖಲಿಸಿಲ್ಲ. ಈ ಹತಾಶೆ ಅವರನ್ನು ಕಾಡುತ್ತಿದೆ. ಈ ಇನಿಂಗ್ಸ್ ನಲ್ಲಿ ಉತ್ತಮ ಲಯದಲ್ಲಿದ್ದಾಗ ಔಟಾಗಿದ್ದು ಅವರ ಹತಾಶೆ ಹೆಚ್ಚಿಸಿತ್ತು.