Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಾವೇ ಗ್ರೇಟ್ ಎಂದು ಬೀಗುತ್ತಿದ್ದ ರವಿಶಾಸ್ತ್ರಿ, ಕೊಹ್ಲಿ ಜೋಡಿಗೆ ಗರ್ವಭಂಗ

ನಾವೇ ಗ್ರೇಟ್ ಎಂದು ಬೀಗುತ್ತಿದ್ದ ರವಿಶಾಸ್ತ್ರಿ, ಕೊಹ್ಲಿ ಜೋಡಿಗೆ ಗರ್ವಭಂಗ
ಸೆಂಚೂರಿಯನ್ , ಬುಧವಾರ, 17 ಜನವರಿ 2018 (16:50 IST)
ಸೆಂಚೂರಿಯನ್: ದ.ಆಫ್ರಿಕಾ ಸರಣಿ ಆರಂಭಕ್ಕೂ ಮುನ್ನ ಸಂದರ್ಶನವೊಂದರಲ್ಲಿ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಇದುವರೆಗೆ ಇಂತಹ ತಂಡ ಭಾರತೀಯ ಕ್ರಿಕೆಟ್ ನಲ್ಲಿ ಇರಲಿಲ್ಲ. ಈ ತಂಡದಲ್ಲಿರುವವರೆಲ್ಲರೂ ಗೆಲುವಿಗಾಗಿಯೇ ಆಡೋದು ಎಂದು ಜಂಬದಿಂದಲೇ ಹೇಳಿಕೊಂಡಿದ್ದರು.
 

ಅವರ ಈ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆದರೆ ತವರಿನಲ್ಲಿ ಅನುಭವಿಸಿದ ಯಶಸ್ಸಿನ ಅಲೆಯಲ್ಲಿ ದ.ಆಫ್ರಿಕಾ ವಿಮಾನವೇರಿದ್ದ ಟೀಂ ಇಂಡಿಯಾಗೆ ಸೋಲಿನ ಸ್ವಾಗತ ಸಿಕ್ಕಿದೆ. ಮೊದಲ ಪಂದ್ಯದಲ್ಲಿ ಸೋತಾಗ ಅಭಿಮಾನಿಗಳೂ ಟೀಂ ಇಂಡಿಯಾವನ್ನು ಸಮರ್ಥಿಸಿಕೊಂಡಿದ್ದರು. ಆದರೆ ಎರಡನೇ ಟೆಸ್ಟ್ ನಲ್ಲೂ ಪ್ರದರ್ಶನ ಸುಧಾರಿಸಿಲ್ಲ. ಪರಿಣಾಮ ಹೀನಾಯ ಸೋಲು.

ಈ ಸರಣಿ ಸೋಲಿನೊಂದಿಗೆ ಟೀಂ ಇಂಡಿಯಾ ಹಲವು ಬೇಡದ ದಾಖಲೆಗಳನ್ನು ಮೈಮೇಲೆ ಹಾಕಿಕೊಂಡಿದೆ. 2015 ರಿಂದ ಕಳೆದ ಶ್ರೀಲಂಕಾ ಸರಣಿಯವರೆಗೆ ಎರಡು ವರ್ಷ ಟೀಂ ಇಂಡಿಯಾ ಟೆಸ್ಟ್ ಸರಣಿಯನ್ನು ಸೋತಿರಲಿಲ್ಲ. ಈಗ ಆ ಗೆಲುವಿನ ಸರಪಳಿ ಕಳಚಿಕೊಂಡಿದೆ. ಇದರೊಂದಿಗೆ ದ.ಆಫ್ರಿಕಾ ವಿರುದ್ಧ ಭಾರತ ಐದನೇ ಬಾರಿಗೆ ಟೆಸ್ಟ್ ಸರಣಿ ಸೋತಂತಾಗಿದೆ.

ದ್ವಿತೀಯ ಇನಿಂಗ್ಸ್ ನಲ್ಲಿ ಕೇವಲ 135 ರನ್ ಗಳಿಗೆ ಆಲೌಟ್ ಆದ ಟೀಂ ಇಂಡಿಯಾ ಕೇವಲ 100 ರನ್ ಗಳ ಅಂತರದಲ್ಲಿ 7 ಕ್ಕಿಂತ ಹೆಚ್ಚು ವಿಕೆಟ್ ಕಳೆದುಕೊಂಡ ಕುಖ್ಯಾತಿಗೆ ಇದು ಆರನೇ ಬಾರಿಗೆ ಒಳಗಾಯಿತು.  ಭಾರತದ ಚೇತೇಶ್ವರ ಪೂಜಾರ ಎರಡೂ ಇನಿಂಗ್ಸ್ ಗಳಲ್ಲಿ ರನೌಟ್ ಆಗುವ ಮೂಲಕ ಟೆಸ್ಟ್ ಪಂದ್ಯವೊಂದರ ಎರಡೂ ಇನಿಂಗ್ಸ್ ನಲ್ಲಿ ರನೌಟ್ ಆದ ಮೊದಲ ಭಾರತೀಯ ಎಂಬ ಕುಖ್ಯಾತಿಗೊಳಗಾದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

‘ಲುಂಗಿ’ ಡ್ಯಾನ್ಸ್ ಗೆ ಟೀಂ ಇಂಡಿಯಾ ಕ್ರಿಕೆಟಿಗರು ಸುಸ್ತೋ ಸುಸ್ತು!