Webdunia - Bharat's app for daily news and videos

Install App

ಮಹಿಳಾ ಅಭಿಮಾನಿಯ ವರ್ತನೆಯಿಂದ ಗಲಿಬಿಲಿಯಾದ ವಿರಾಟ್ ಕೊಹ್ಲಿ: ವಿಡಿಯೋ ವೈರಲ್

Krishnaveni K
ಶನಿವಾರ, 9 ನವೆಂಬರ್ 2024 (08:58 IST)
Photo Credit: X
ಮುಂಬೈ: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮಹಿಳಾ ಅಭಿಮಾನಿಯೊಬ್ಬರ ವರ್ತನೆಯಿಂದ ಗಲಿಬಿಲಿಗೊಂಡರೂ ಕೊನೆಗೆ ನಗು ನಗುತ್ತಲೇ ಸೆಲ್ಫೀಗೆ ಪೋಸ್ ಕೊಟ್ಟ ಘಟನೆಯೊಂದು ನಡೆದಿದ್ದು, ಈ ವಿಡಿಯೋ ಈಗ ವೈರಲ್ ಆಗಿದೆ.

ಪತ್ನಿ ಅನುಷ್ಕಾ ಶರ್ಮಾ ಜೊತೆಗೆ ಕೊಹ್ಲಿ ಮುಂಬೈನಲ್ಲಿ ಕಾಲ ಕಳೆಯುತ್ತಿದ್ದಾರೆ. ಬಿಡುವಿನ ಸಮಯದಲ್ಲಿ ಕೊಹ್ಲಿ ಪತ್ನಿ ಜೊತೆ ರೆಸ್ಟೋರೆಂಟ್ ಒಂದಕ್ಕೆ ಬಂದಿದ್ದಾರೆ. ಈ ವೇಳೆ ಎಂದಿನಂತೆ ಅವರನ್ನು ಪಪ್ಪಾರಾಜಿಗಳು ಫೋಟೋಗೆ ಪೋಸ್ ಕೊಡಲು ಕೇಳಿಕೊಂಡಿದ್ದಾರೆ.

ಅದರಂತೆ ಕೊಹ್ಲಿ ಎಲ್ಲರಿಗೂ ನಗು ನಗುತ್ತಲೇ ಪತ್ನಿಯ ಕೈ ಹಿಡಿದು ಪೋಸ್ ಕೊಟ್ಟಿದ್ದಾರೆ. ಇದಾದ ಬಳಿಕ ಅನುಷ್ಕಾ ಒಳಗೆ ಹೋಗಿದ್ದಾರೆ. ಆದರೆ ಕೊಹ್ಲಿಯನ್ನು ಓರ್ವ ಮಹಿಳಾ ಅಭಿಮಾನಿ ಕೈ ಹಿಡಿದು ಎಳೆದು ತಡೆದು ನಿಲ್ಲಿಸಿದ್ದಾರೆ. ತನ್ನ ಕೈ ಹಿಡಿದ ಮಹಿಳಾ ಅಭಿಮಾನಿಯನ್ನು ನೋಡಿ ಕೊಹ್ಲಿ ಗಲಿಬಿಲಿಗೊಂಡರು.

ಆದರೂ ಮಹಿಳೆ ಮಾತ್ರ ಕೊಹ್ಲಿಯ ಕೈ ಬಿಡದೇ ಹಿಡಿದುಕೊಂಡೇ ಸೆಲ್ಫೀ ತೆಗೆಯಲು ಯತ್ನಿಸಿದರು. ಆದರೆ ಸಾಧ್ಯವಾಗದೇ ಇದ್ದಾಗ ಎದುರು ಇದ್ದವರ ಕೈಗೆ ಕ್ಯಾಮರಾ ಕೊಟ್ಟರು. ಆಗಲೂ ಕೊಹ್ಲಿಯ ಕೈ ಬಿಟ್ಟಿರಲಿಲ್ಲ. ಕೊಹ್ಲಿ ಮಾತ್ರ ಪದೇ ಪದೇ ಒಳಗೆ ಹೋದ ಅನುಷ್ಕಾರನ್ನು ನೋಡುತ್ತಲೇ ಇದ್ದರು. ಈ ವಿಡಿಯೋ ಈಗ ವೈರಲ್ ಆಗಿದೆ.
 

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

KL Rahul: ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಕೆಎಲ್ ರಾಹುಲ್ ನಾಯಕನಾಗಬೇಕಾ ಶುಬ್ಮನ್ ಗಿಲ್ ಬೇಕಾ

IPL 2025: ಟೈಟನ್ಸ್‌ ವಿರುದ್ಧ ಡೆಲ್ಲಿಗೆ ಮುಖಭಂಗ: ಗುಜರಾತ್‌, ಆರ್‌ಸಿಬಿ, ಪಂಜಾಬ್‌ ತಂಡಗಳಿಗೆ ಪ್ಲೇಆಫ್‌ ಟಿಕೆಟ್‌

ಜೀವಬೆದರಿಕೆ ಬೆನ್ನಲ್ಲೇ ತಿರುಪತಿಗೆ ಟೀ ಇಂಡಿಯಾ ಕೋಚ್ ಭೇಟಿ, ಇಬ್ಬರು ಮಕ್ಕಳನ್ನು ಕೈಹಿಡಿದು ನಡೆದ ಗೌತಮ್ ಗಂಭೀರ್‌

ದೋಹಾ ಡೈಮಂಡ್‌ ಲೀಗ್‌ನಲ್ಲಿ ನೀರಜ್ ಚೋಪ್ರಾ ವಿರುದ್ಧ ಸ್ಪರ್ಧಿಸದ ಪಾಕ್‌ನ ಅರ್ಷದ್‌ ನದೀಮ್, ಕಾರಣ ಹೀಗಿದೆ

ಮುಂದಿನ ಸುದ್ದಿ
Show comments