ಕೋಲ್ಕೊತ್ತಾ: ಧೋನಿ ನಿವೃತ್ತಿಯಾದ ಬಳಿಕ ಟೀಂ ಇಂಡಿಯಾಗೆ ಫಿನಿಶರ್ ಕೊರತೆ ಕಾಡುತ್ತಿತ್ತು. ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಸೇರಿದಂತೆ ಹಲವರು ಈ ಜಾಗಕ್ಕೆ ಬಂದು ಹೋದರೂ ಇದುವರೆಗೆ ಈ ಕ್ರಮಾಂಕಕ್ಕೆ ಖಾಯಂ ಆಟಗಾರ ಸಿಕ್ಕಿರಲಿಲ್ಲ.
ಇದೀಗ ಕೋಚ್ ರಾಹುಲ್ ದ್ರಾವಿಡ್ ನೇತೃತ್ವದ ಹೊಸ ಟೀಂ ಮ್ಯಾನೇಜ್ ಮೆಂಟ್ ಯುವ ಕ್ರಿಕೆಟಿಗ ವೆಂಕಟೇಶ್ ಅಯ್ಯರ್ ರನ್ನು ಫಿನಿಶರ್ ಕೆಲಸ ಮಾಡುವ ಟಾಸ್ಕ್ ನೀಡಿತ್ತು. ಅದನ್ನು ಅವರು ಪೂರ್ತಿ ಮಾಡಿದ್ದಾರೆ ಎಂಬ ಖುಷಿ ದ್ರಾವಿಡ್ ರದ್ದಾಗಿದೆ.
ವೆಂಕಟೇಶ್ ಅಯ್ಯರ್ ಐಪಿಎಲ್ ಗಳಲ್ಲಿ ಆರಂಭಿಕರಾಗಿರಬಹುದು. ಆದರೆ ಇಲ್ಲಿ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸಿದೆವು. ಅವರಿಗೆ ನಾವು ಚಾಲೆಂಜ್ ಮಾಡಿದ್ದೆವು. ಯಾವುದೇ ಕ್ರಮಾಂಕದಲ್ಲೂ ಆಡಿ ತೋರಿಸಲು ಹೇಳಿದೆವು. ಅವರು ಆ ಟಾಸ್ಕ್ ಪೂರ್ತಿ ಮಾಡಿದ್ದಾರೆ. ಪಂದ್ಯದಿಂದ ಪಂದ್ಯಕ್ಕೆ ಅವರು ಸುಧಾರಿಸಿದರು ಎಂದು ದ್ರಾವಿಡ್ ಹೊಗಳಿದ್ದಾರೆ.