ದುಬೈ: ಟೆಸ್ಟ್ ಕ್ರಿಕೆಟ್ ನ್ನು ಇನ್ನಷ್ಟು ಆಸಕ್ತಿದಾಯಕವಾಗಿಸಲು ಐಸಿಸಿ ನೂತನವಾಗಿ ಆರಂಭಿಸಿರುವ ಟೆಸ್ಟ್ ವಿಶ್ವಕಪ್ ಚಾಂಪಿಯನ್ ಶಿಪ್ ಗೆ ಇಂದಿನಿಂದ ಚಾಲನೆ ಸಿಗಲಿದೆ.
ಇಂದು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ಪ್ರತಿಷ್ಠಿತ ಆಶಸ್ ಟೆಸ್ಟ್ ಸರಣಿ ಆರಂಭವಾಗಲಿದ್ದು, ಈ ಮೂಲಕ ಟೆಸ್ಟ್ ಚಾಂಪಿಯನ್ ಶಿಪ್ ಉದ್ಘಾಟನೆಯಾಗಲಿದೆ. ಭಾರತಕ್ಕೆ ಈ ಚಾಂಪಿಯನ್ ಶಿಪ್ ನ ಮೊದಲ ಸರಣಿ ವೆಸ್ಟ್ ಇಂಡೀಸ್ ತಂಡದೊಂದಿಗೆ ಆರಂಭವಾಗಲಿದೆ.
ಒಟ್ಟು ಎರಡು ವರ್ಷಗಳ ಕಾಲ ಟೂರ್ನಿಯ ನಡೆಯಲಿದ್ದು, ಒಟ್ಟು 9 ಟೆಸ್ಟ್ ಆಡುವ ದೇಶಗಳು ಪಾಲ್ಗೊಳ್ಳಲಿವೆ. ಪ್ರತೀ ತಂಡಗಳು ತಾವು ಆಯ್ಕೆ ಮಾಡಿದ 6 ತಂಡಗಳೊಂದಿಗೆ ಸರಣಿ ಆಡಲಿದ್ದು, ಅಂತಿಮವಾಗಿ ಆಯಾ ತಂಡಗಳು ಪಡೆದ ಅಂಕದ ಮೇಲೆ ಅಂತಿಮವಾಗಿ ಎರಡು ಅಗ್ರ ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ತಂಡಗಳ ನಡುವೆ ಫೈನಲ್ ಪಂದ್ಯ ನಡೆಯಲಿದ್ದು, ಅದರಲ್ಲಿ ಗೆದ್ದ ತಂಡವನ್ನು ಚಾಂಪಿಯನ್ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಇನ್ನು ಮುಂದೆ ಟೆಸ್ಟ್ ಸರಣಿಗಳನ್ನೂ ಯಾವುದೇ ತಂಡಗಳೂ ಉಪೇಕ್ಷೆ ಮಾಡುವಂತಿಲ್ಲ.