Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಒಂದೇ ಬದಲಾವಣೆಯಿಂದ ಗೆದ್ದ ಟೀಂ ಇಂಡಿಯಾ

ಒಂದೇ ಬದಲಾವಣೆಯಿಂದ ಗೆದ್ದ ಟೀಂ ಇಂಡಿಯಾ
ಅಹಮ್ಮದಾಬಾದ್ , ಭಾನುವಾರ, 21 ಮಾರ್ಚ್ 2021 (09:14 IST)
ಅಹಮ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ಸರಣಿ ಟೀಂ ಇಂಡಿಯಾ ಪಾಲಾಗಿದೆ. ನಿನ್ನೆ ನಡೆದ ಪಂದ್ಯವನ್ನು ಟೀಂ ಇಂಡಿಯಾ 36 ರನ್ ಗಳಿಂದ ಗೆದ್ದು ಸರಣಿಯನ್ನು 3-2 ರಿಂದ ತನ್ನದಾಗಿಸಿಕೊಂಡಿದೆ.

Team India

ನಿನ್ನೆ ಪಂದ್ಯದಲ್ಲಿ ಭಾರತ ಮಾಡಿದ ಒಂದೇ ಒಂದು ಬದಲಾವಣೆ ತಂಡದ ರನ್ ಗತಿಯನ್ನೇ ಹೆಚ್ಚಿಸಿತು. ನಿನ್ನೆಯ ಪಂದ್ಯದಲ್ಲಿ ಕೆಎಲ್ ರಾಹುಲ್ ಗೆ ಕೊಕ್ ನೀಡಿದ್ದ ಕೊಹ್ಲಿ ತಾವೇ ರೋಹಿತ್ ಶರ್ಮಾ ಜೊತೆ ಆರಂಭಿಕರಾಗಿ ಕಣಕ್ಕಿಳಿದರು. ಇದುವರೆಗೆ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸುತ್ತಿದ್ದ ಟೀಂ ಇಂಡಿಯಾಗೆ ಈ ಬದಲಾವಣೆ ಫಲ ಕೊಟ್ಟಿತು. ಆರಂಭಿಕ ವಿಕೆಟ್ ಗೆ ರೋಹಿತ್-ಕೊಹ್ಲಿ ಜೋಡಿ 94 ರನ್ ಪೇರಿಸಿತು. ಅದರಲ್ಲಿ ಹಿಟ್ ಮ್ಯಾನ್ ಕೊಡುಗೆ 64 ರನ್.

ಬಳಿಕ ಬಂದ ಸೂರ್ಯಕುಮಾರ್ ಯಾದವ್ ತಮ್ಮ ಹೊಡೆಬಡಿಯ ಶೈಲಿಯಲ್ಲಿ 17 ಎಸೆತಗಳಲ್ಲಿ 32 ರನ್ ಚಚ್ಚಿ ರನ್ ರೇಟ್ ಹೆಚ್ಷಿಸಿ ನಿರ್ಗಮಿಸಿದರು. ಆದರೆ ಇನ್ನೊಂದು ತುದಿಯಲ್ಲಿ ಬಂಡೆಯಂತೆ ನಿಂತಿದ್ದ ಕೊಹ್ಲಿ ಕೊನೆಯ ಓವರ್ ಗಳಲ್ಲಿ ಸತತವಾಗಿ ಚೆಂಡನ್ನು ಬೌಂಡರಿ ಗೆರೆ ದಾಟಿಸುವ ಮೂಲಕ ಭಾರತಕ್ಕೆ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 224 ರನ್ ಗಳ ಬೃಹತ್ ಮೊತ್ತ ಪೇರಿಸಲು ಕಾರಣರಾದರು.

ಈ ಮೊತ್ತ ಬೆನ್ನತ್ತಿದ ಇಂಗ್ಲೆಂಡ್ ಆರಂಭದಲ್ಲೇ ಜೇಸನ್ ರಾಯ್ ರನ್ನು ಶೂನ್ಯಕ್ಕೆ ಕಳೆದುಕೊಂಡರೂ ಡೇವಿಡ್ ಮಲನ್ (68), ಜೋಸ್ ಬಟ್ಲರ್ (52) ಅಪಾಯಕಾರಿ ಎನಿಸಿದರು. ಆದರೆ ಇವರಿಬ್ಬರ ವಿಕೆಟ್ ಬಿದ್ದ ಮೇಲೆ ಭಾರತ ಪಂದ್ಯದ ಮೇಲೆ ತನ್ನ ನಿಯಂತ್ರಣ ಸಾಧಿಸಿತು. ಅಂತಿಮವಾಗಿ ಇಂಗ್ಲೆಂಡ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಲಷ್ಟೇ ಶಕ್ತವಾಯಿತು. ಇಂತಹ ಹೈ ಸ್ಕೋರಿಂಗ್ ಪಂದ್ಯದಲ್ಲೂ ಬಿಗುವಿನ ದಾಳಿ ನಡೆಸಿದ ಭುವನೇಶ್ವರ್ ಕುಮಾರ್ 2 ವಿಕೆಟ್ ಕಬಳಿಸಿ ಪಂದ್ಯ ಶ್ರೇಷ್ಠರಾದರು. ಸರಣಿಯುದ್ದಕ್ಕೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ವಿರಾಟ್ ಕೊಹ್ಲಿ ಸರಣಿ ಶ್ರೇಷ್ಠರಾದರು.

Share this Story:

Follow Webdunia kannada

ಮುಂದಿನ ಸುದ್ದಿ

ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಗೆ ಆಯ್ಕೆಯಾದ ಕನ್ನಡಿಗ ಪ್ರಸಿದ್ಧ ಕೃಷ್ಣ