Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಟೆಸ್ಟ್ ಕ್ರಿಕೆಟ್ ಆಡದ ಇಬ್ಬರು ಸದಸ್ಯರಿಗೆ ಟೀಂ ಇಂಡಿಯಾ ಆಯ್ಕೆ ಸಮಿತಿಯಿಂದ ಗೇಟ್ ಪಾಸ್

ಟೆಸ್ಟ್ ಕ್ರಿಕೆಟ್ ಆಡದ ಇಬ್ಬರು ಸದಸ್ಯರಿಗೆ ಟೀಂ ಇಂಡಿಯಾ ಆಯ್ಕೆ ಸಮಿತಿಯಿಂದ ಗೇಟ್ ಪಾಸ್
Mumbai , ಬುಧವಾರ, 4 ಜನವರಿ 2017 (11:55 IST)
ಮುಂಬೈ: ಬಿಸಿಸಿಐ ಮೇಲೆ ಸುಪ್ರೀಂ ಕೋರ್ಟ್ ಲೋಧಾ ಸಮಿತಿ ವರದಿ ಹೇರಿರುವುದರಿಂದ ಆಯ್ಕೆ ಸಮಿತಿಯ ಇಬ್ಬರು ಸದಸ್ಯರು ಸ್ಥಾನ ಕಳೆದುಕೊಳ್ಳುವ ಭೀತಿಯಿದೆ. ಗಗನ್ ಖೋಡಾ ಮತ್ತು ಜತಿನ್ ಪರಂಜಪೆ ಈ ಇಬ್ಬರು ಸದಸ್ಯರು.

ಈ ಇಬ್ಬರೂ ಟೆಸ್ಟ್ ಕ್ರಿಕೆಟ್ ಆಡಿದವರಲ್ಲ. ಕೇವಲ ಏಕದಿನ ಪಂದ್ಯ ಮಾತ್ರ ಆಡಿದ್ದಾರೆ. ಲೋಧಾ ಸಮಿತಿಯ ಶಿಫಾರಸ್ಸಿನಂತೆ ಟೆಸ್ಟ್ ಕ್ರಿಕೆಟ್ ಆಡದವರು ಆಯ್ಕೆ ಸಮಿತಿಯ ಸದಸ್ಯರಾಗುವಂತಿಲ್ಲ. ಸದ್ಯ ಎಂಎಸ್ ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿಯಲ್ಲಿರುವವರ ಪೈಕಿ ಈ ಇಬ್ಬರು ಸದಸ್ಯರಿಗೆ ಈ ನಿಯಮದ ಬಿಸಿ ತಟ್ಟಲಿದೆ.

ಲೋಧಾ ಸಮಿತಿಯ ಅನ್ವಯ ಆಯ್ಕೆ ಸಮಿತಿಯಲ್ಲಿ ಟೆಸ್ಟ್ ಕ್ರಿಕೆಟ್ ಆಡಿದ ಮೂವರು ಸದಸ್ಯರು ಇರಬೇಕು.  ಹೀಗಾಗಿ ಮುಂದಿನ ಇಂಗ್ಲೆಂಡ್ ಸರಣಿಗೆ ಭಾರತ ತಂಡ ಪ್ರಕಟಿಸುವ ಆಯ್ಕೆ ಸಮಿತಿಯಲ್ಲಿ ಟೆಸ್ಟ್ ಕ್ರಿಕೆಟ್ ಆಡಿದ ಎಂಎಸ್ ಕೆ ಪ್ರಸಾದ್, ದೇವಾಂಗ್ ಗಾಂಧಿ ಮತ್ತು ಸರಣ್ ದೀಪ್ ಸಿಂಗ್ ಮಾತ್ರ ಇರುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ-ಪಾಕಿಸ್ತಾನ ವೈರತ್ವ ಕೊನೆಗೊಳ್ಳಲಿದೆಯಾ?