Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ-ಪಾಕಿಸ್ತಾನ ವೈರತ್ವ ಕೊನೆಗೊಳ್ಳಲಿದೆಯಾ?

ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ-ಪಾಕಿಸ್ತಾನ ವೈರತ್ವ ಕೊನೆಗೊಳ್ಳಲಿದೆಯಾ?
NewDelhi , ಬುಧವಾರ, 4 ಜನವರಿ 2017 (11:27 IST)
ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಪ್ರೇಮಿಗಳಿಗೆ ಸಂತಸದ ಸುದ್ದಿ. ಉಭಯ ದೇಶಗಳ ಕ್ರಿಕೆಟ್ ಸರಣಿ ನೋಡಲು ಬಯಸುವ ಕ್ರಿಕೆಟ್ ಪ್ರೇಮಿಗಳಿಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಅಂತಹದ್ದೊಂದು ವೇದಿಕೆ ಸಿಗಲಿದೆ.


ಇದಕ್ಕಿಂತ ಮೊದಲು ಭಾರತ ಟಿ-ಟ್ವೆಂಟಿ ವಿಶ್ವಕಪ್ ನಲ್ಲಿ ಪಾಕಿಸ್ತಾನದ ವಿರುದ್ಧ ಆಡಿ ಗೆದ್ದಿತ್ತು. ಇದೀಗ ಏಕದಿನ ಮಾದರಿಯಲ್ಲಿ ಉಭಯ ತಂಡಗಳು ಕಾದಾಡಲಿವೆ. ಜೂನ್ 4 ರಂದು ಈ ಪಂದ್ಯ ನಡೆಯಲಿದೆ. ಅದು 2017 ರ ಚಾಂಪಿಯನ್ಸ್ ಟ್ರೋಫಿಯಲ್ಲಿ. ಈ ಕೂಟ ಇಂಗ್ಲೆಂಡ್ ನಲ್ಲಿ ನಡೆಯಲಿದೆ.

ಇದೇ ವೇಳೆ ಇದುವರೆಗೆ ಅಂತಾರಾಷ್ಟ್ರೀಯ ಪಂದ್ಯಗಳಿಲ್ಲದೇ ಸೊರಗಿದ್ದ ಪಾಕಿಸ್ತಾನಕ್ಕೆ ಇದೀಗ ವೆಸ್ಟ್ ಇಂಡೀಸ್ ತಂಡ ಪ್ರವಾಸ ಮಾಡಲು ಆಸಕ್ತಿ ವಹಿಸಿದೆ. ಇದೇ ವರ್ಷ ಮಾರ್ಚ್ ನಲ್ಲಿ ಎರಡು ಟಿ-ಟ್ವೆಂಟಿ ಪಂದ್ಯ ಆಡುವ ಸಾಧ್ಯತೆಯಿದೆ.

ಲಾಹೋರ್ ನಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ಉಗ್ರರು ದಾಳಿ ನಡೆಸಿದ ಮೇಲೆ ಯಾವುದೇ ತಂಡಗಳು ಆ ದೇಶಕ್ಕೆ ಪ್ರವಾಸ ಮಾಡಲು ನಿರಾಕರಿಸುತ್ತಿವೆ. ಆದರೆ ಅದೇ ಲಾಹೋರ್ ನಲ್ಲಿ ಪಂದ್ಯ ಆಯೋಜಿಸಲು ಪಾಕ್ ಕ್ರಿಕೆಟ್ ಮಂಡಳಿ ಇದೀಗ ತಯಾರಿ ನಡೆಸುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಏನೇ ಮಾಡಿದರೂ ಡೇವಿಡ್ ವಾರ್ನರ್ ಗೆ ವೀರೇಂದ್ರ ಸೆಹ್ವಾಗ್ ದಾಖಲೆ ಮೀರಲಾಗಲಿಲ್ಲ