Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮುಂಬೈ: ಕೊರೋನಾ ಕಾರಣದಿಂದಾಗಿ ಟೀಂ ಇಂಡಿಯಾ ಮತ್ತು ದ.ಆಫ್ರಿಕಾ ನಡುವೆ ನಡೆಯಲಿರುವ ಕ್ರಿಕೆಟ್ ಸರಣಿ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಿದೆ.
ಈ ಮೊದಲು ಭಾರತ ಡಿಸೆಂಬರ್ 8 ಕ್ಕೆ ಆಫ್ರಿಕಾಗೆ ಪ್ರಯಾಣ ಬೆಳೆಸಿ ಡಿಸೆಂಬರ್ 17 ರಿಂದ ಟೆಸ್ಟ್ ಸರಣಿ ಆಡಲಿದೆ ಎನ್ನಲಾಗಿತ್ತು. ಆದರೆ ಇದೀಗ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಿದ್ದು, ಈ ಸರಣಿಯಲ್ಲಿ ನಿಗದಿಯಾಗಿದ್ದ ಟಿ20 ಸರಣಿಯನ್ನು ಸದ್ಯಕ್ಕೆ ಕೈ ಬಿಡಲಾಗಿದೆ. ಇದನ್ನು ಮುಂದಿನ ದಿನಗಳಲ್ಲಿ ಆಡಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.
ಡಿಸೆಂಬರ್ 26 ರಿಂದ ಟೆಸ್ಟ್ ಸರಣಿ ಆರಂಭವಾಗಲಿದ್ದು, ಉಳಿದೆರಡು ಟೆಸ್ಟ್ ಪಂದ್ಯಗಳು ಜನವರಿಯಲ್ಲಿ ನಡೆಯಲಿದೆ. ಅದಾದ ಬಳಿಕ ಏಕದಿನ ಸರಣಿ ಮುಗಿಸಿ ಭಾರತ ತವರಿಗೆ ವಾಪಸಾಗಲಿದೆ. ಒಂದು ವಾರ ವಿಳಂಬವಾಗಿ ಭಾರತ ತಂಡ ಆಫ್ರಿಕಾಗೆ ಪ್ರಯಾಣ ಬೆಳೆಸಲಿದೆ. ಪಂದ್ಯ ನಡೆಯಲಿರುವ ತಾಣಗಳ ಬಗ್ಗೆ ಮುಂದಿನ ಎರಡು ದಿನಗಳೊಳಗಾಗಿ ತೀರ್ಮಾನವಾಗಲಿದೆ ಎಂದು ಜಯ್ ಶಾ ಹೇಳಿದ್ದಾರೆ.