Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವಿರಾಟ್ ಕೊಹ್ಲಿಗೇ ರೆಸ್ಟ್ ನೀಡಿದ ಟೀಂ ಇಂಡಿಯಾ

ವಿರಾಟ್ ಕೊಹ್ಲಿಗೇ ರೆಸ್ಟ್ ನೀಡಿದ ಟೀಂ ಇಂಡಿಯಾ
ಬೇ ಓವಲ್ , ಭಾನುವಾರ, 2 ಫೆಬ್ರವರಿ 2020 (12:52 IST)
ಬೇ ಓವಲ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದನೇ ಟಿ20 ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿಗೇ ವಿಶ್ರಾಂತಿ ನೀಡಲಾಗಿದೆ. ರೋಹಿತ್ ಶರ್ಮಾ ಇಂದು ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ.


ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ. ಇತ್ತೀಚೆಗಿನ ವರದಿ ಬಂದಾಗ ಆರಂಭದಲ್ಲಿಯೇ ಸಂಜು ಸ್ಯಾಮ್ಸನ್ ವಿಕೆಟ್ ಕಳೆದುಕೊಂಡಿದ್ದು ರೋಹಿತ್ ಶರ್ಮಾ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇತ್ತೀಚೆಗಿನ ವರದಿ ಬಂದಾಗ 3 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 25 ರನ್ ಗಳಿಸಿದೆ.

ಉಳಿದಂತೆ ಭಾರತ ತಂಡದ ಕಳೆದ ಪಂದ್ಯದಲ್ಲಿ ಆಡಿದ ಯುವಪಡೆಯನ್ನೇ ಕಣಕ್ಕಿಳಿಸಿದೆ. ಈ ಪಂದ್ಯವನ್ನೂ ಭಾರತ ಗೆದ್ದರೆ ಸರಣಿ ಕ್ಲೀನ್ ಸ್ವೀಪ್ ಆಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಎಲ್ ರಾಹುಲ್ ಅಂದು ಮೌನವಾಗಿದ್ದು ಯಾಕೆ?!