ಪುಣೆ: ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ಜಯಗಳಿಸಿದ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗರು ಪುಣೆಗೆ ಬಂದಿಳಿದಿದ್ದಾರೆ.
ಇಂಗ್ಲೆಂಡ್ ವಿರುದ್ಧ ಮಂಗಳವಾರದಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಟೀಂ ಇಂಡಿಯಾ ಕ್ರಿಕೆಟಿಗರು ಪುಣೆಗೆ ಬಂದಿದ್ದಾರೆ. ಟಿ20 ಸರಣಿಯಲ್ಲಿ ಜಯಗಳಿಸಿರುವ ಆತ್ಮವಿಶ್ವಾಸದಲ್ಲಿರುವ ಕ್ರಿಕೆಟಿಗರು ಈಗ ಏಕದಿನ ಫಾರ್ಮ್ಯಾಟ್ ಗೆ ಸಿದ್ಧತೆ ನಡೆಸಲಿದ್ದಾರೆ. ಇಂದಿನಿಂದಲೇ ನೆಟ್ಸ್ ಅಭ್ಯಾಸದಲ್ಲಿ ಭಾಗಿಯಾಗುವ ಸಾಧ್ಯತೆಯಿದೆ.
ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಮತ್ತಿತರರು ಸಾಮಾಜಿಕ ಜಾಲತಾಣದಲ್ಲಿ ಪುಣೆಗೆ ಪ್ರಯಾಣಿಸಿರುವ ಮಾಹಿತಿ ನೀಡಿದ್ದಾರೆ. ನಾಳೆಯಿಂದ ಹಗಲು-ರಾತ್ರಿಯಾಗಿ ಏಕದಿನ ಸರಣಿ ಆರಂಭವಾಗಲಿದೆ.