Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸ್ವಯಂಕೃತ ಅಪರಾಧಗಳಿಗೆ ಬೆಲೆ ತೆತ್ತ ಟೀಂ ಇಂಡಿಯಾ

ಸ್ವಯಂಕೃತ ಅಪರಾಧಗಳಿಗೆ ಬೆಲೆ ತೆತ್ತ ಟೀಂ ಇಂಡಿಯಾ
ಮುಂಬೈ , ಶುಕ್ರವಾರ, 9 ಸೆಪ್ಟಂಬರ್ 2022 (08:30 IST)
ಮುಂಬೈ: ಈ ಬಾರಿ ಏಷ್ಯಾ ಕಪ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ಫೈನಲ್ ಗೇರುತ್ತದೆ, ಭಾರತ ಫೈನಲ್ ಗೆಲ್ಲುತ್ತದೆ ಎಂಬುದು ಎಲ್ಲರ ಕನಸಾಗಿತ್ತು. ಆದರೆ ಅದೀಗ ಕನಸಾಗಿಯೇ ಉಳಿದಿದೆ.

ಫೈನಲ್ ಗೆಲ್ಲುವುದು ಬಿಡಿ ಸೂಪರ್ ಫೋರ್ ಹಂತದಲ್ಲಿಯೇ ಭಾರತ ಗೆಲುವು ಕಂಡಿದೆ. ಇದಕ್ಕೆ ಕಾರಣ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಮಾಡಿದ ತಪ್ಪುಗಳು. ಏಷ್ಯಾ ಕಪ್ ಗೆ ತಂಡದ ಆಯ್ಕೆ ನಡೆದಾಗಲೇ ಎದುರಾಳಿಗಳನ್ನು ನಿಯಂತ್ರಿಸಬಲ್ಲ ಸಶಕ್ತ ವೇಗಿ ತಂಡದಲ್ಲಿ ಇಲ್ಲದೇ ಇರುವುದನ್ನು ಅಭಿಮಾನಿಗಳೂ ಗುರುತಿಸಿದ್ದರು. ಆದರೆ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಮಾತ್ರ ತನ್ನ ಪ್ರಯೋಗದ ಮೇಲೆಯೇ ಅತಿಯಾದ ವಿಶ್ವಾಸ ಹೊಂದಿತ್ತು.

ಯುಎಇನಲ್ಲಿ ಹೇಳಿಕೇಳಿ ಎರಡನೇ ಅವಧಿಯಲ್ಲಿ ಬ್ಯಾಟಿಂಗ್ ಮಾಡುವ ತಂಡ ಗೆಲ್ಲುವುದೇ ಹೆಚ್ಚು. ಇದು ಐಪಿಎಲ್ ನಲ್ಲೂ ಅನೇಕ ಬಾರಿ ಪ್ರೂವ್ ಆಗಿದೆ. ಹಾಗಾಗಿ ಇಲ್ಲಿ ಆಡುವಾಗ ಬೌಲಿಂಗ್ ಪಡೆ ಪರಿಣಾಮಕಾರಿಯಾಗಿರಬೇಕು. ಆದರೆ ಭಾರತ ಇಲ್ಲಿಯೇ ಎಡವಿತು. ಟಾಸ್ ನ್ನೇ ಎಲ್ಲಾ ಸಂದರ್ಭದಲ್ಲೂ ನಂಬಿ ಕೂರಲು ಸಾಧ‍್ಯವಿಲ್ಲ. ಅಗತ್ಯವಿದ್ದಾಗ ಎರಡು ಬಾರಿ ರೋಹಿತ್ ಟಾಸ್ ಸೋತರು. ಇದರಿಂದಾಗಿ ಅನಿವಾರ್ಯವಾಗಿ ಮೊದಲು ಬ್ಯಾಟಿಂಗ್ ಮಾಡಬೇಕಾಯಿತು. ಆದರೆ ದ್ವಿತೀಯ ಸರದಿಯಲ್ಲಿ ಎದುರಾಳಿಯನ್ನು ಕಟ್ಟಿಹಾಕುವಷ್ಟು ಪರಿಣಾಮಕಾರಿ ಬೌಲರ್ ಗಳಿಲ್ಲದೇ ತಂಡ ಸೋತಿತು.

Share this Story:

Follow Webdunia kannada

ಮುಂದಿನ ಸುದ್ದಿ

ಏಷ್ಯಾ ಕಪ್: ಕಾಲ ಮಿಂಚಿ ಹೋದ ಮೇಲೆ ಫಾರ್ಮ್ ಗೆ ಬಂದ ಟೀಂ ಇಂಡಿಯಾ