ಮೆಲ್ಬೋರ್ನ್: ಪರ್ತ್ ನಲ್ಲಿ ನಡೆದಿದ್ದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಸೋತ ಬಳಿಕ ಮುಂದಿನ ಪಂದ್ಯ ಗೆಲ್ಲಬೇಕಾದರೆ ಟೀಂ ಇಂಡಿಯಾ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಲೇಬೇಕಿದೆ.
ಟೀಂ ಇಂಡಿಯಾ ಕಳೆದ ಕೆಲವು ದಿನಗಳಿಂದ ತಲೆನೋವಾಗಿರುವುದು ಆರಂಭಿಕರ ಫಾರ್ಮ್. ಕೆಎಲ್ ರಾಹುಲ್, ಮುರಳಿ ವಿಜಯ್ ಇಬ್ಬರೂ 10 ರನ್ ಒಳಗೇ ವಿಕೆಟ್ ಒಪ್ಪಿಸಿ ನಡೆಯುತ್ತಿರುವುದರಿಂದ ಭಾರತ ಸಂಕಷ್ಟಕ್ಕೆ ಸಿಲುಕುತ್ತಿದೆ. ಇದು ಮಧ್ಯಮ ಕ್ರಮಾಂಕದ ಮೇಲೆ ಅತಿಯಾದ ಒತ್ತಡ ತರುತ್ತಿದೆ. ಹೀಗಾಗಿ ಮುಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ರಾಹುಲ್, ವಿಜಯ್ ಗೆ ಕೊಕ್ ನೀಡಿ ಹೊಸ ಆರಂಭಿಕರಿಗೆ ಅವಕಾಶ ನೀಡಲೇಬೇಕಿದೆ.
ಇನ್ನು ಆಸ್ಟ್ರೇಲಿಯಾಕ್ಕೆ ಬಂದ ಮೇಲೆ ಸ್ಪಿನ್ ವಿಭಾಗವನ್ನು ಸಂಪೂರ್ಣವಾಗಿ ಕಡೆಗಣಿಸಿ ಕೊಹ್ಲಿ ತಪ್ಪು ಮಾಡಿದ್ದಾರೆ. ಮೊದಲ ಪಂದ್ಯದಲ್ಲಿ ಹಿರಿಯ ಆಟಗಾರ ಎನ್ನುವ ಕಾರಣಕ್ಕೆ ಅಶ್ವಿನ್ ಗೆ ಸ್ಥಾನ ಸಿಕ್ಕಿತ್ತು. ಆದರೆ ದ್ವಿತೀಯ ಪಂದ್ಯದಲ್ಲಿ ವೇಗಿಗಳ ಪಿಚ್ ನಲ್ಲಿ ಪರಿಣಾಮಕಾರಿ ದಾಳಿ ನಡೆಸಿ ಹಲವು ಬಾರಿ ಭಾರತಕ್ಕೆ ಗೆಲುವು ತಂದುಕೊಟ್ಟ ರವೀಂದ್ರ ಜಡೇಜಾರನ್ನು ಕಡೆಗಣಿಸಿ ಕೊಹ್ಲಿ ತಪ್ಪು ಮಾಡಿದರು. ಆಸ್ಟ್ರೇಲಿಯಾ ವೇಗದ ಪಿಚ್ ಗಳಾದರೂ ಕಳೆದ ಎರಡೂ ಪಂದ್ಯಗಳಲ್ಲಿ ಸ್ಪಿನ್ನರ್ ಗಳೇ ನಿರ್ಣಾಯಕ ಪಾತ್ರ ವಹಿಸಿದರು. ಹೀಗಾಗಿ ವೇಗಿಗಳಿಗೆ ಅತಿಯಾದ ಮಹತ್ವ ಕೊಡುವುದನ್ನು ಬಿಡಬೇಕಿದೆ. ಇವೆರಡೂ ತಪ್ಪುಗಳನ್ನು ತಿದ್ದಿಕೊಳ್ಳದೇ ಹೋದರೆ ಮುಂದಿನ ಪಂದ್ಯದಲ್ಲೂ ಸೋಲು ಗ್ಯಾರಂಟಿ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ