ಲೀಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಆಘಾತಕ್ಕೊಳಗಾಗಿದೆ.
ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಆಡಿದ್ದ ತಂಡವನ್ನೇ ಟೀಂ ಇಂಡಿಯಾ ಮತ್ತೆ ಕಣಕ್ಕಿಳಿಸಿದೆ. ಆದರೆ ಈ ಬಾರಿ ಸೀನ್ ಮಾತ್ರ ಉಲ್ಟಾ ಆಗಿದೆ. ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಗೆ ಆರಂಭಿಕ ಆಘಾತ ನೀಡಿದ್ದ ಟೀಂ ಇಂಡಿಯಾ ಇಲ್ಲಿ ತಾನೇ ಆರಂಭದಲ್ಲೇ 3 ವಿಕೆಟ್ ಉದುರಿಸಿಕೊಂಡು ಸಂಕಷ್ಟದಲ್ಲಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಇತ್ತೀಚೆಗಿನ ವರದಿ ಬಂದಾಗ 3 ವಿಕೆಟ್ ನಷ್ಟಕ್ಕೆ 30 ರನ್ ಗಳಿಸಿದೆ. ಮೊದಲೆರಡು ಪಂದ್ಯಗಳಲ್ಲಿ ಭಾರತದ ಹೀರೋ ಆಗಿದ್ದ ಕೆಎಲ್ ರಾಹುಲ್ ಶೂನ್ಯಕ್ಕೆ ನಿರ್ಗಮಿಸಿದರೆ, ಚೇತೇಶ್ವರ ಪೂಜಾರ ಮತ್ತೊಂದು ವೈಫಲ್ಯ ಕಂಡಿದ್ದು 1 ರನ್ ಗೆ ವಿಕೆಟ್ ಒಪ್ಪಿಸಿದ್ದಾರೆ. ನಾಯಕ ವಿರಾಟ್ ಕೊಹ್ಲಿಯದ್ದೂ ಕೇವಲ 7 ರನ್ ಕೊಡುಗೆ. ಇದೀಗ ರೋಹಿತ್ ಶರ್ಮಾ 9 ಮತ್ತು ಅಜಿಂಕ್ಯಾ ರೆಹಾನೆ ಖಾತೆ ತೆರೆಯದೇ ಕ್ರೀಸ್ ನಲ್ಲಿದ್ದಾರೆ. ಇಂಗ್ಲೆಂಡ್ ಪರ ಈ ಮೂರೂ ವಿಕೆಟ್ ಸ್ಟಾರ್ ವೇಗಿ ಜೇಮ್ಸ್ ಆಂಡರ್ಸನ್ ಪಾಲಾಗಿದೆ.