ಬಾರ್ಬಡೋಸ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಇಂದು ಟಾಸ್ ಸೋತು ಮೊದಲು ಬ್ಯಾಟಿಂಗ್ ಗಿಳಿಸಲ್ಪಟ್ಟ ಟೀಂ ಇಂಡಿಯಾ ಇತ್ತೀಚೆಗಿನ ವರದಿ ಬಂದಾಗ 17.4 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 95 ರನ್ ಗಳಿಸಿದೆ.
ಇಂದಿನ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಕಿಂಗ್ ಕೊಹ್ಲಿ ಇಬ್ಬರೂ ಆಡುತ್ತಿಲ್ಲ. ಅವರ ಬದಲಿಗೆ ಅಕ್ಸರ್ ಪಟೇಲ್, ಸಂಜು ಸ್ಯಾಮ್ಸನ್ ಅವಕಾಶ ಪಡೆದಿದ್ದಾರೆ. ಹಾರ್ದಿಕ್ ಪಾಂಡ್ಯ ನಾಯಕರಾಗಿದ್ದಾರೆ.
ಆರಂಭಿಕರಾಗಿ ಕಣಕ್ಕಿಳಿದ ಶುಬ್ಮನ್ ಗಿಲ್ ಮತ್ತು ಇಶಾನ್ ಕಿಶನ್ ನಿಧಾನಗತಿಯ ಆರಂಭ ಮಾಡಿದರು. ಅದರಲ್ಲೂ ಗಿಲ್ ವಿಂಡೀಸ್ ನ ದುರ್ಬಲ ಬೌಲಿಂಗ್ ಎದುರೂ ರನ್ ಗಳಿಸಲು ತಿಣುಕಾಡಿದರು. ವಿಂಡೀಸ್ ಸರಣಿಯುದ್ದಕ್ಕೂ ಅವರ ಕಳಪೆ ಆಟ ಮತ್ತೆ ಮುಂದುವರಿಯಿತು. ಇಂದು 49 ಎಸೆತ ಎದುರಿಸಿದರ ಅವರು ಗಳಿಸಿದ್ದು ಕೇವಲ 34 ರನ್. ಆದರೆ ಇನ್ನೊಂದೆಡೆ ಉತ್ತಮ ಆಟವಾಡಿದ ಇಶಾನ್ ಕಿಶನ್ ಸತತ ಎರಡನೇ ಅರ್ಧಶತಕ ಸಿಡಿಸಿದರು. 55 ಎಸೆತ ಎದುರಿಸಿದ ಅವರು 1 ಸಿಕ್ಸರ್ ಸಹಿತ 55 ರನ್ ಗಳಿಸುವಷ್ಟರಲ್ಲಿ ಔಟಾದರು. ಇದೀಗ ಕ್ರೀಸ್ ನಲ್ಲಿ ಸಂಜು ಸ್ಯಾಮ್ಸನ್ ಮತ್ತು ಅಕ್ಸರ್ ಪಟೇಲ್ ಇದ್ದು ಇನ್ನೂ ಖಾತೆ ತೆರೆಯಬೇಕಿದೆಯಷ್ಟೇ.