Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮೊದಲ ಇನಿಂಗ್ಸ್ ನಲ್ಲಿ ಮಾಡಿದ ತಪ್ಪನ್ನು ದ್ವಿತೀಯ ಇನಿಂಗ್ಸ್ ನಲ್ಲಿ ಸರಿಪಡಿಸಿಕೊಂಡ ಟೀಂ ಇಂಡಿಯಾ

ಮೊದಲ ಇನಿಂಗ್ಸ್ ನಲ್ಲಿ ಮಾಡಿದ ತಪ್ಪನ್ನು ದ್ವಿತೀಯ ಇನಿಂಗ್ಸ್ ನಲ್ಲಿ ಸರಿಪಡಿಸಿಕೊಂಡ ಟೀಂ ಇಂಡಿಯಾ
ಕೇಪ್ ಟೌನ್ , ಸೋಮವಾರ, 8 ಜನವರಿ 2018 (17:17 IST)
ಕೇಪ್ ಟೌನ್: ದ.ಆಫ್ರಿಕಾ ಮತ್ತು ಭಾರತ ನಡುವಿನ ಮೊದಲ ಟೆಸ್ಟ್ ರೋಚಕ ಹಂತ ತಲುಪಿದೆ. ಮೊದಲ ಇನಿಂಗ್ಸ್ ನಲ್ಲಿ ಆಫ್ರಿಕಾ ತಂಡಕ್ಕೆ ಜತೆಯಾಟ ನಡೆಸಲು ಬಿಟ್ಟು ತಪ್ಪು ಮಾಡಿದ್ದ ಭಾರತ ದ್ವಿತೀಯ ಇನಿಂಗ್ಸ್ ನಲ್ಲಿ ಅದಕ್ಕೆ ಅವಕಾಶ ಕೊಡಲಿಲ್ಲ.
 

ಇದರಿಂದಾಗಿ ಮೊದಲ ಇನಿಂಗ್ಸ್ ನ ಹಿನ್ನಡೆ ಹೊರತಾಗಿಯೂ ಟೀಂ ಇಂಡಿಯಾ ಗೆಲುವಿನ ವಾಸನೆ ನೀಡಿದೆ. ದ್ವಿತೀಯ ಇನಿಂಗ್ಸ್ ನಲ್ಲಿ ಅತಿಥೇಯರನ್ನು ಕೇವಲ 130 ರನ್ ಗಳಿಗೆ ಕಟ್ಟಿ ಹಾಕಿ ಭಾರತ ಒಳ್ಳೆಯ ಕೆಲಸವನ್ನೇ ಮಾಡಿದೆ.

ಇದಕ್ಕೆ ಕಾರಣ ಭಾರತದ ವೇಗಿಗಳಾದ ಮೊಹಮ್ಮದ್ ಶಮಿ, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್ ಮತ್ತು ಜಸ್ಪ್ರೀತ್ ಬುಮ್ರಾ. ನಾಲ್ವರೂ ವೇಗಿಗಳು ಸಂಘಟಿತ ಹೋರಾಟ ಕೈಗೊಂಡ ಪರಿಣಾಮ ಭಾರತಕ್ಕೆ 208 ರನ್ ಗಳ ಸುಲಭದ ಗುರಿ ಸಿಕ್ಕಿದೆ. ಬುಮ್ರಾ ಮತ್ತು ಶಮಿ ತಲಾ ಮೂರು ವಿಕೆಟ್ ಕಿತ್ತರೆ, ಪಾಂಡ್ಯ ಮತ್ತು ಭುವನೇಶ್ವರ್ ಕುಮಾರ್ ತಲಾ 2 ವಿಕೆಟ್ ಗಳನ್ನು ಹಂಚಿಕೊಂಡರು. ಅಶ್ವಿನ್ ಕೇವಲ 1 ಓವರ್ ಎಸೆದರಷ್ಟೆ.  ಎಬಿಡಿ ವಿಲಿಯರ್ಸ್ 35 ರನ್ ಗಳಿಸಿದ್ದೇ ಗರಿಷ್ಠ ಮೊತ್ತ. ನಾಯಕ ಫಾ ಡು ಪ್ಲೆಸಿಸ್ ಶೂನ್ಯಕ್ಕೆ ಔಟಾಗಿದ್ದು ಆಫ್ರಿಕನ್ನರಿಗೆ ಆಘಾತ ನೀಡಿತ್ತು.

ಇದೀಗ ಇನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ ಕೂಡಾ ಶಿಖರ್ ಧವನ್ (16) ಮತ್ತು, ಮುರಳಿ ವಿಜಯ್ (13) ಕಳೆದುಕೊಂಡಿದ್ದು, ಚೇತೇಶ್ವರ ಪೂಜಾರ ಇನಿಂಗ್ಸ್ ಮುನ್ನಡೆಸುತ್ತಿದ್ದಾರೆ. ಟೀಂ ಇಂಡಿಯಾ 2 ವಿಕೆಟ್ ನಷ್ಟಕ್ಕೆ 30 ರನ್ ಗಳಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಿ ಅಮಿತಾಭ್ ಬಚ್ಚನ್ ಗೂ, ಹಾರ್ದಿಕ್ ಪಾಂಡ್ಯಗೂ ಇದೆ ಈ ಕನೆಕ್ಷನ್!