ವಿಶಾಖಪಟ್ಟಣ: ಶ್ರೀಲಂಕಾ ವಿರುದ್ಧ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್ ಗೆದ್ದರೂ ಅಚ್ಚರಿಯೆಂಬಂತೆ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ.
ಇದಕ್ಕೆ ಸಮರ್ಥನೆ ಕೊಟ್ಟಿರುವ ನಾಯಕ ರೋಹಿತ್ ಶರ್ಮಾ ‘ಹಗಲು ರಾತ್ರಿ ಪಂದ್ಯ ನಡೆಯುತ್ತಿರುವುದರಿಂದ ಇಬ್ಬನಿ ಪ್ರಧಾನ ಪಾತ್ರ ವಹಿಸಬಹುದೆಂದು ಫೀಲ್ಡಿಂಗ್ ಮಾಡುವ ನಿರ್ಧಾರಕ್ಕೆ ಬಂದಿದ್ದೇವೆ’ ಎಂದಿದ್ದಾರೆ.
ದ್ವಿತೀಯ ಸರದಿಯಲ್ಲಿ ಇಬ್ಬನಿ ಬೀಳುವಾಗ ಬೌಲಿಂಗ್ ನಡೆಸುವುದು ಕಷ್ಟವಾಗುತ್ತದೆ. ಬಾಲ್ ಮೇಲೆ ನಿಯಂತ್ರಣ ಸಿಗುವುದಿಲ್ಲ ಎನ್ನುವ ಕಾರಣಕ್ಕೆ ಭಾರತ ಬೌಲಿಂಗ್ ಮಾಡಲು ನಿರ್ಧರಿಸಿದೆ. ಈ ಪಂದ್ಯದಲ್ಲಿ ಕುಲದೀಪ್ ಯಾದವ್ ಮರಳಿದ್ದು, ಯುವ ಬೌಲರ್ ವಾಷಿಂಗ್ಟನ್ ಸುಂದರ್ ಅನಾರೋಗ್ಯದ ಕಾರಣದಿಂದ ಹೊರಗುಳಿದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ