ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗರು ಕ್ರಿಕೆಟ್ ನಲ್ಲಿ ಕೋಟಿ ಕೋಟಿ ದುಡಿದರೂ ಅಷ್ಟಕ್ಕೇ ಸುಮ್ಮನಾಗಿಲ್ಲ. ಹೆಚ್ಚಿನ ಕ್ರಿಕೆಟಿಗರು ತಮ್ಮದೇ ಆದ ಬ್ಯುಸಿನೆಸ್ ಮಾಡಿಕೊಂಡು ನಿವೃತ್ತಿಯ ಬಳಿಕದ ಜೀವನವನ್ನೂ ಭದ್ರ ಮಾಡಿಕೊಂಡಿದ್ದಾರೆ. ಹೆಚ್ಚಿನವರು ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು, ಹೋಟೆಲ್ ಉದ್ಯಮಿಗಳಾಗಿರುವ ಟೀಂ ಇಂಡಿಯಾ ಕ್ರಿಕೆಟಿಗರು ಯಾರು ನೋಡೋಣ.
ವಿರಾಟ್ ಕೊಹ್ಲಿ: ವಿಶ್ವದ ಶ್ರೀಮಂತ ಕ್ರಿಕೆಟಿಗ ವಿರಾಟ್ ಕೊಹ್ಲಿ ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಒನ್ 9 ಕಮ್ಯೂನ್ ಎಂಬ ಫುಡ್ ಚೈನ್ ನ ಸಹ ಮಾಲಿಕ ಕೊಹ್ಲಿ. 2017 ರಲ್ಲಿ ದೆಹಲಿಯಲ್ಲಿ ಬಾರ್ ಆಂಡ್ ರೆಸ್ಟೋರೆಂಟ್ ಆರಂಭಿಸಿದ್ದರು.
ರವೀಂದ್ರ ಜಡೇಜಾ: ಟೀಂ ಇಂಡಿಯಾ ಆಲ್ ರೌಂಡರ್ ಜಡ್ಡುಸ್ ಫುಡ್ ಫೀಲ್ಡ್ ಎನ್ನುವ ಕೆಫೆ ಕಮ್ ಬಾರ್ ನ ವಿವಿಧ ಶಾಖೆಗಳನ್ನು ಹೊಂದಿದ್ದಾರೆ.
ಕಪಿಲ್ ದೇವ್: ಭಾರತಕ್ಕೆ ಪ್ರಥಮ ವಿಶ್ವಕಪ್ ತಂದುಕೊಟ್ಟ ಮಾಜಿ ನಾಯಕ ಕಪಿಲ್ ದೇವ್ ಏಷ್ಯಾ ಮತ್ತು ಕಾಂಟಿನೆಂಟ್ ಫುಡ್ ಒದಗಿಸುವ ಇಲೆವೆನ್ ಎನ್ನುವ ರೆಸ್ಟೋರೆಂಟ್ ಹೊಂದಿದ್ದಾರೆ.
ಜಹೀರ್ ಖಾನ್: ಮಾಜಿ ವೇಗಿ ಜಹೀರ್ ಖಾನ್ ಡೈನ್ ಫೈನ್ ಎನ್ನುವ ರೆಸ್ಟೋರೆಂಟ್ ನ ಮಾಲಿಕರು.
ಸಚಿನ್ ತೆಂಡುಲ್ಕರ್: ಒಮ್ಮೆ ಹೋಟೆಲ್ ಬ್ಯುಸಿನೆಸ್ ಗೆ ಎಂಟ್ರಿಕೊಟ್ಟರೂ ಯಶಸ್ವಿಯಾಗಲಿಲ್ಲವೆಂಬ ಕಾರಣಕ್ಕೆ ಈಗ ಸ್ಥಗಿತಗೊಳಿಸಿದ್ದಾರೆ. ಸಚಿನ್ಸ್ ಎನ್ನುವ ಹೋಟೆಲ್ ಆರಂಭಿಸಿದ್ದರು.
ಧೋನಿ: ಟೀಂ ಇಂಡಿಯಾದ ಯಶಸ್ವೀ ನಾಯಕ ಧೋನಿ ಹೋಟೆಲ್ ಮಹಿ ರೆಸಿಡೆನ್ಸಿಯ ಮಾಲಿಕರೂ ಹೌದು.