Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮುಂಬೈ: ಒಂದೆಡೆ ದ.ಆಫ್ರಿಕಾ ವಿರುದ್ಧ ಟಿ20 ಸರಣಿ ನಡೆಯುತ್ತಿದ್ದರೆ ಟೀಂ ಇಂಡಿಯಾದ ಇನ್ನೊಂದು ತಂಡ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟೆಸ್ಟ್ ಪಂದ್ಯಕ್ಕೆ ಆಂಗ್ಲ ನಾಡಿಗೆ ತೆರಳಿದೆ.
ಕ್ರಿಕೆಟಿಗ ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ, ರವೀಂದ್ರ ಜಡೇಜಾ, ಪ್ರಸಿದ್ಧ ಕೃಷ್ಣ ಸೇರಿದಂತೆ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿರುವ ಕೆಲವು ಕ್ರಿಕೆಟಿಗರು ಇಂಗ್ಲೆಂಡ್ ವಿಮಾನವೇರಿದ್ದಾರೆ.
ಜುಲೈ 1 ರಿಂದ ಏಕಮಾತ್ರ ಟೆಸ್ಟ್ ಪಂದ್ಯ ನಡೆಯಲಿದ್ದು, ಅದಾದ ಬಳಿಕ ಭಾರತ ತಂಡ ಟಿ20 ಸರಣಿ ಆಡಲಿದೆ. ಈ ನಡುವೆ ಇನ್ನೊಂದು ತಂಡ ಐರ್ಲೆಂಡ್ ವಿರುದ್ಧ ಟಿ20 ಸರಣಿ ಆಡಲಿದೆ.