ಲಂಡನ್: ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆದ ನಿನ್ನೆಯ ಸೆಮಿಫೈನಲ್ ಪಂದ್ಯದಲ್ಲಿ ಹಲವು ದಾಖಲೆಗಳನ್ನು ಟೀಂ ಇಂಡಿಯಾ ಆಟಗಾರರು ಬರೆದಿದ್ದಾರೆ.
ಬಾಂಗ್ಲಾದೇಶವನ್ನು 9 ವಿಕೆಗಳಿಂದ ಬಗ್ಗುಬಡಿಯುವ ಮೂಲಕ ಟೀಂ ಇಂಡಿಯಾ ಮೂರನೇ ಬಾರಿಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಗೇರಿತು. ಇದರೊಂದಿಗೆ ವಿಶ್ವಕಪ್, ಟಿ-20 ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿ ಸೇರಿದಂತೆ 10 ಐಸಿಸಿ ಟೂರ್ನಿಗಳ ಫೈನಲ್ ಗೇರಿದ ಆಸ್ಟ್ರೇಲಿಯಾ ದಾಖಲೆಯನ್ನು ಸರಿಗಟ್ಟಿತು.
ಈ ಪಂದ್ಯದಲ್ಲಿ ಶತಕ ಗಳಿಸುವ ಮೂಲಕ ರೋಹಿತ್ ಶರ್ಮಾ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಅತೀ ಹೆಚ್ಚು ಶತಕ ಭಾರಿಸಿದ ಭಾರತೀಯರ ಪೈಕಿ ಎರಡನೆಯವರೆನಿಸಿಕೊಂಡರು. 2 ಶತಕ ಗಳಿಸಿದ ರೋಹಿತ್ ಇದೀಗ ಸೌರವ್ ಗಂಗೂಲಿ (3)ಗಿಂತ ನಂತರದ ಸ್ಥಾನದಲ್ಲಿದ್ದಾರೆ.
43 ರನ್ ಗಳಿಸಿದ ಶಿಖರ್ ಧವನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಪರ ಅತ್ಯಧಕ ರನ್ ಗಳಿಸಿದ ದಾಖಲೆಗೆ ಪಾತ್ರರಾದರು. 685 ರನ್ ಇದೀಗ ಧವನ್ ಖಾತೆಯಲ್ಲಿದೆ. ಗಂಗೂಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ ಕೂಡಾ 500 ಗಡಿ ದಾಟಿದ್ದಾರೆ.
ಅಜೇಯ 96 ರನ್ ಗಳಿಸಿ ನಾಯಕ ವಿರಾಟ್ ಕೊಹ್ಲಿ ವೇಗವಾಗಿ ಏಕದಿನ ಪಂದ್ಯಗಳಲ್ಲಿ 8000 ರನ್ ಪೂರೈಸಿದ ದ. ಆಫ್ರಿಕಾ ತಂಡದ ಎಬಿಡಿ ವಿಲಿಯರ್ಸ್ ದಾಖಲೆ ಮುರಿದರು. 175 ಇನಿಂಗ್ಸ್ ಗಳಿಂದ ಕೊಹ್ಲಿ ಈ ಸಾಧನೆ ಮಾಡಿದರು.