Publish Date: Thu, 12 Jul 2018 (09:58 IST)
Updated Date: Thu, 12 Jul 2018 (10:00 IST)
ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಏಕದಿನ ಸರಣಿ ಆರಂಭವಾಗಲಿದ್ದು, ಟೀಂ ಇಂಡಿಯಾಗೆ ಮತ್ತೆ ಏಕದಿನ ನಂ.1 ತಂಡವಾಗುವ ಅವಕಾಶ ಎದುರಾಗಿದೆ.
ಆದರೆ ಅದು ಅಷ್ಟು ಸುಲಭವಲ್ಲ. ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಮೂರು ಏಕದಿನ ಪಂದ್ಯಗಳ ಸರಣಿ ಆಡಲಿದ್ದು, ಈ ಸರಣಿಯ ಎಲ್ಲಾ ಪಂದ್ಯಗಳನ್ನು ಗೆದ್ದು ಇಂಗ್ಲೆಂಡ್ ಗೆ ವೈಟ್ ವಾಶ ಮಾಡಿದರೆ ಸದ್ಯ ದ್ವಿತೀಯ ಸ್ಥಾನದಲ್ಲಿರುವ ಟೀಂ ಇಂಡಿಯಾ ನಂ.1 ತಂಡವಾಗಿರುವ ಇಂಗ್ಲೆಂಡ್ ನ್ನು ಹಿಂದಿಕ್ಕಿ ಅಗ್ರ ಸ್ಥಾನಿಯಾಗಬಹುದು.
ಇಂಗ್ಲೆಂಡ್ ಸದ್ಯಕ್ಕೆ 126 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಟೀಂ ಇಂಡಿಯಾ 122 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಸದ್ಯದ ಟೀಂ ಇಂಡಿಯಾ ಫಾರ್ಮ್ ನೋಡಿದರೆ ಅದು ಕಷ್ಟವೇನೂ ಅಲ್ಲ. ಆದರೆ ಇಂಗ್ಲೆಂಡ್ ಕೂಡಾ ಪ್ರಬಲ ತಂಡವಾದ್ದರಿಂದ ಹಾದಿ ಸ್ವಲ್ಪ ಕಷ್ಟವೇ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.