Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

T20 WC 2024: ಮೂರು ಐಸಿಸಿ ಟ್ರೋಫಿ, ಮೂರು ಫೈನಲ್ ರೋಹಿತ್ ಶರ್ಮಾ ಹೊಸ ದಾಖಲೆ

Team India

Krishnaveni K

ಗಯಾನ , ಶುಕ್ರವಾರ, 28 ಜೂನ್ 2024 (08:14 IST)
Photo Credit: Facebook
ಗಯಾನ: ಮೂರು ಐಸಿಸಿ ಟ್ರೋಫಿ, ಮೂರು ಬಾರಿ ಸತತವಾಗಿ ಫೈನಲ್ ಗೆ… ಇದು ಈ ಟಿ20 ವಿಶ್ವಕಪ್ ಸೆಮಿಫೈನಲ್ ಬಳಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ದಾಖಲೆ.

ಟಿ20 ವಿಶ್ವಕಪ್ 2024 ರ ಸೆಮಿಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ 68 ರನ್ ಗಳಿಂದ ಗೆಲುವು ಕಂಡುಕೊಂಡ ಬಳಿಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೊಸ ದಾಖಲೆ ಮಾಡಿದರು. ಸತತ ಮೂರು ಬಾರಿ ಐಸಿಸಿ ಟ್ರೋಫಿಯ ಫೈನಲ್ ತಲುಪಿದ ಅಪರೂಪದ ಸಾಧನೆ ಮಾಡಿದರು.

ಆದರೆ ಈ ಸಾಧನೆ ಮಾಡಿದ ಏಕೈಕ ನಾಯಕ ರೋಹಿತ್ ಅಲ್ಲ. ಇದಕ್ಕೆ ಮೊದಲು ಭಾರತದ ಪರ ಸೌರವ್ ಗಂಗೂಲಿ ಈ ಸಾಧನೆ ಮಾಡಿದ್ದರು. ಜಾಗತಿಕವಾಗಿ ವೆಸ್ಟ್ ಇಂಡೀಸ್ ದಂತಕತೆ ಕ್ಲೈವ್ ಲಾಯ್ಡ್, ನ್ಯೂಜಿಲೆಂಡ್ ನ ಕೇನ್ ವಿಲಿಯಮ್ಸನ್ ಕೂಡಾ ಈ ಸಾಧನೆ ಮಾಡಿದ್ದಾರೆ. ಈಗ ರೋಹಿತ್ ಶರ್ಮಾ ಸತತ ಮೂರನೇ ಬಾರಿಗೆ ಐಸಿಸಿ ಟ್ರೋಫಿ ಫೈನಲ್ ಗೇರಿದ ನಾಲ್ಕನೇ ನಾಯಕರಾಗಿದ್ದಾರೆ.

ಕ್ಲೈವ್ ಲಾಯ್ಡ್ 1975 ರ ವಿಶ್ವಕಪ್, 1979 ರ  ವಿಶ್ವಕಪ್, 1983 ರ ವಿಶ್ವಕಪ್ ಫೈನಲ್ ಗೇರಿದ್ದರು. ಭಾರತದ ಸೌರವ್ ಗಂಗೂಲಿ 2000 ರ ಚಾಂಪಿಯನ್ಸ್ ಟ್ರೋಫಿ ಫೈನಲ್, 2002 ಚಾಂಪಿಯನ್ಸ್ ಟ್ರೋಫಿ ಫೈನಲ್ ಮತ್ತು 2003 ರ ಏಕದಿನ ವಿಶ್ವಕಪ್ ಫೈನಲ್ ಗೇರಿದ್ದರು. ಕೇನ್ ವಿಲಿಯಮ್ಸನ್ 2019 ವಿಶ್ವಕಪ್, 2021 ರ ಡಬ್ಲ್ಯುಟಿಸಿ ಟೂರ್ನಿ ಫೈನಲ್ ಮತ್ತು 2021 ರ ವಿಶ್ವಕಪ್ ಫೈನಲ್ ಗೇರಿದ್ದರು. ಇದೀಗ ರೋಹಿತ್ ಶರ್ಮಾ 2023 ರ ಡಬ್ಲ್ಯುಟಿಸಿ ಫೈನಲ್, 2023 ರ ಏಕದಿನ ವಿಶ್ವಕಪ್ ಫೈನಲ್ ಮತ್ತು ಇದೀಗ ಟಿ20 ವಿಶ್ವಕಪ್ ಫೈನಲ್ ಗೇರಿ ಈ ಅಪರೂಪದ ಸಾಧನೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

T20 WC 2024: ಗೆದ್ದರೂ ಅಳುತ್ತಿದ್ದ ರೋಹಿತ್ ಶರ್ಮಾ: ವಿರಾಟ್ ಕೊಹ್ಲಿ ಹೈ ಫೈ ಕೊಡಲೇ ಇಲ್ಲ