Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟ: ಭಾರತ-ಪಾಕ್ ಪಂದ್ಯ ದಿನಾಂಕ ಬಹಿರಂಗ

IND vs Pak

Krishnaveni K

ದುಬೈ , ಶನಿವಾರ, 6 ಜನವರಿ 2024 (08:40 IST)
Photo Courtesy: Twitter
ದುಬೈ: ಬಹುನಿರೀಕ್ಷಿತ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ವೇಳಾ ಪಟ್ಟಿ ಪ್ರಕಟವಾಗಿದ್ದು ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ.

ಈ ಬಾರಿ ವೆಸ್ಟ್ ಇಂಡೀಸ್ ಮತ್ತು ಅಮೆರಿಕಾ ಜಂಟಿ ಆತಿಥ್ಯದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಜೂನ್ 1 ರಿಂದ ಜೂನ್ 29 ರವರೆಗೆ ಟೂರ್ನಮೆಂಟ್ ನಡೆಯಲಿದೆ. ಉದ್ಘಾಟನಾ ಪಂದ್ಯದಲ್ಲಿ ಯುಎಸ್ ಎ ಮತ್ತು ಕೆನಡಾ ತಂಡಗಳು ಮುಖಾಮುಖಿಯಾಗಲಿದೆ.

ಭಾರತ ತನ್ನ ಮೊದಲ ಪಂದ್ಯವನ್ನು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಆಡಲಿದೆ. ಬಹುನಿರೀಕ್ಷಿತ ಭಾರತ-ಪಾಕಿಸ್ತಾನ ಪಂದ್ಯ ಜೂನ್ 9 ರಂದು ನ್ಯೂಯಾರ್ಕ್ ನಲ್ಲಿ ನಡೆಯಲಿದೆ. ಮೂರನೇ ಪಂದ್ಯ ಜೂ.12 ರಂದು ಅಮೆರಿಕಾ ವಿರುದ್ಧ ಮತ್ತು ನಾಲ್ಕನೇ ಪಂದ್ಯವನ್ನು ಕೆನಡಾ ವಿರುದ್ಧ ಫ್ಲೋರಿಡಾದಲ್ಲಿ ಆಡಲಿದೆ.

ತಂಡಗಳನ್ನು ಎ, ಬಿ, ಸಿ, ಡಿ ಆಧಾರದಲ್ಲಿ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಗುಂಪು ಎ ನಲ್ಲಿ ಭಾರತ ಸ್ಥಾನ ಪಡೆದಿದ್ದು, ಭಾರತ ಜೊತೆಗೆ ಪಾಕಿಸ್ತಾನ, ಐರ್ಲೆಂಡ್, ಯುಎಸ್ ಎ ಮತ್ತು ಕೆನಡಾ ತಂಡಗಳಿವೆ. ಬಿ ಗುಂಪಿನಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ, ನಮೀಬಿಯಾ, ಸ್ಕಾಟ್ಲೆಂಡ್, ಓಮನ್ ಸ್ಥಾನ ಪಡೆದಿದೆ. ಗುಂಪಿ ಸಿನಲ್ಲಿ ನ್ಯೂಜಿಲೆಂಡ್, ಅಫ್ಘಾನಿಸ್ತಾನ, ವೆಸ್ಟ್ ಇಂಡೀಸ್, ಉಗಾಂಡ, ಪಿಎನ್ ಜಿ ತಂಡಗಳಿವೆ. ಗುಂಪು ಡಿ ಯಲ್ಲಿ ದ.ಆಫ್ರಿಕಾ, ಬಾಂಗ್ಲಾದೇಶ, ನೆದರ್ಲ್ಯಾಂಡ್ಸ್, ಶ್ರೀಲಂಕಾ, ನೇಪಾಳ ತಂಡಗಳಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದಲ್ಲಿ ಈ ಥರಾ ಪಿಚ್ ಮಾಡಿದ್ರೆ ಎಲ್ಲರೂ ಟೀಕೆ ಮಾಡ್ತಾರೆ: ರೋಹಿತ್ ಶರ್ಮಾ ವ್ಯಂಗ್ಯ