ಬಾರ್ಬಡೋಸ್: ಟಿ20 ವಿಶ್ವಕಪ್ 2024 ರ ಸೂಪರ್ 8 ಪಂದ್ಯದಲ್ಲಿ ಯುಎಸ್ ಎ ತಂಡವನ್ನು 10 ವಿಕೆಟ್ ಗಳಿಂದ ಸೋಲಿಸಿದ ಇಂಗ್ಲೆಂಡ್ ಸೆಮಿಫೈನಲ್ ತಲುಪಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಯುಎಸ್ ಎ 18.5 ಓವರ್ ಗಳಲ್ಲಿ 115 ಕ್ಕೆ ಆಲೌಟ್ ಆಗಿತ್ತು. ಎನ್ ಆರ್ ಕುಮಾರ್ 30, ಆಂಡರ್ಸನ್ 29, ಹರ್ಮೀತ್ ಸಿಂಗ್ 21 ರನ್ ಗಳಿಸಿದರು. ಇಂಗ್ಲೆಂಡ್ ಪರ ಕ್ರಿಸ್ ಜೋರ್ಡಾನ್ 4, ಸ್ಯಾಮ್ ಕ್ಯುರೇನ್, ಆದಿಲ್ ರಶೀದ್ ತಲಾ 2 ವಿಕೆಟ್ ಕಬಳಿಸಿದರು.
ಈ ಮೊತ್ತ ಬೆನ್ನತ್ತಿದ ಇಂಗ್ಲೆಂಡ್ ಕೇವಲ 9.4 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 117 ರನ್ ಗಳಿಸಿ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತು. ಆರಂಭಿಕ ಫಿಲಿಪ್ ಸಾಲ್ಟ್ ಅಜೇಯ 25 ರನ್ ಗಳಿಸಿದರೆ ಜೋಸ್ ಬಟ್ಲರ್ ಕೇವಲ 38 ಎಸೆತಗಳಿಂದ 7 ಸಿಕ್ಸರ್, 6 ಬೌಂಡರಿ ಸಹಿತ ಅಜೇಯ 83 ರನ್ ಸಿಡಿಸಿದರು.
ಈ ಗೆಲುವಿನೊಂದಿಗೆ ಎರಡನೇ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಇಂಗ್ಲೆಂಡ್ ಸೆಮಿಫೈನಲ್ ಪ್ರವೇಶಿಸಿತು. ಸದ್ಯಕ್ಕೆ ಇಂಗ್ಲೆಂಡ್ ಆಟಗಾರರ ಫಾರ್ಮ್ ಗಮನಿಸಿದರೆ ಯಾವ ತಂಡವೂ ಅವರನ್ನು ಸೆಮಿಫೈನಲ್ ನಲ್ಲಿ ಎದುರಿಸಲು ಬಯಸಲ್ಲ. ಉಳಿದ ಮೂರು ಸೆಮಿಫೈನಲಿಸ್ಟ್ ಗಳು ಯಾರೆಂದು ಇನ್ನೂ ತೀರ್ಮಾನವಾಗಬೇಕಿದೆ.