Select Your Language

Notifications

webdunia
webdunia
webdunia
webdunia

ರಿಷಬ್ ಜೀವವುಳಿಸಿದ ಬಸ್ ಡ್ರೈವರ್ ಸುಶೀಲ್ ಕುಮಾರ್ ಗೆ ಎಲ್ಲೆಡೆ ಮೆಚ್ಚುಗೆ

ರಿಷಬ್ ಪಂತ್
Photo Courtesy: Twitter
ನವದೆಹಲಿ: ಭೀಕರ ರಸ್ತೆ ಅಪಘಾತಕ್ಕೀಡಾಗಿದ್ದ ಟೀಂ ಇಂಡಿಯಾ ಕ್ರಿಕೆಟಿಗ ರಿಷಬ್ ಪಂತ್ ಜೀವವುಳಿಸಿದ್ದು ಹರ್ಯಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕ ಸುಶೀಲ್ ಕುಮಾರ್.

ಉರಿಯುತ್ತಿದ್ದ ಕಾರಿನೊಳಗೆ ಸಿಲುಕಿದ್ದ ರಿಷಬ್ ಹೊರ ಬರಲಾಗದೇ ಹೋಗಿದ್ದರೆ ಕತೆಯೇ ಬೇರೆಯಾಗುತ್ತಿತ್ತು. ಆದರೆ ಅದೃಷ್ಟವಶಾತ್ ಅದೇ ಸಮಯಕ್ಕೆ ಸುಶೀಲ್ ಕುಮಾರ್ ರಿಷಬ್ ರನ್ನು ಕಾಪಾಡಿದ್ದರು.

ಉರಿಯುತ್ತಿದ್ದ ಕಾರಿನಿಂದ ರಿಷಬ್ ರನ್ನು ಹೊರಗೆಳೆದು ಬೆಡ್ ಶೀಟ್ ಮೈಗೆ ಸುತ್ತಿ ಬೆಂಕಿಯಿಂದ ಕಾಪಾಡಿದ್ದರು. ಬಳಿಕ ಆಂಬ್ಯುಲೆನ್ಸ್ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸುಶೀಲ್ ಸಮಯಪ್ರಜ್ಞೆಯಿಂದ ರಿಷಬ್ ಪ್ರಾಣ ಉಳಿದಿದೆ. ಹೀಗಾಗಿ ಈಗ ಸುಶೀಲ್ ರನ್ನು ಇಡೀ ದೇಶವೇ ಕೊಂಡಾಡುತ್ತಿದೆ. ಹರ್ಯಾಣ ರಾಜ್ಯ ಸಾರಿಗೆ ಸಂಸ್ಥೆ ಅವರನ್ನು ಸನ್ಮಾನಿಸಿದೆ. ಎನ್ ಸಿಎ ಅಧ್ಯಕ್ಷ ವಿವಿಎಸ್ ಲಕ್ಷ್ಮಣ್ ಸುಶೀಲ್ ರನ್ನು ಕೊಂಡಾಡಿದ್ದು, ನಿಮ್ಮ ನಿಸ್ವಾರ್ಥ ಸಹಾಯಕ್ಕೆ ನಾವು ಎಂದೆಂದಿಗೂ ಚಿರ ಋಣಿಯಾಗಿರಬೇಕು ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಜು ಸ್ಯಾಮ್ಸನ್ ಡ್ರಾಪ್ ಆಗಲು ಕಾರಣ ರೋಹಿತ್ ಶರ್ಮಾ?