Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮೊಹಾಲಿ: ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಶ್ರೀಲಂಕಾ ಫಾಲೋ ಆನ್ ತಪ್ಪಿಸಲು ದಿಟ್ಟ ಹೋರಾಟ ನಡೆಸುತ್ತಿದೆ.
ಭಾರತ ನೀಡಿದ 574 ರನ್ ಗಳ ಮೊದಲ ಇನಿಂಗ್ಸ್ ಮೊತ್ತ ಹಿಂಬಾಲಿಸುತ್ತಿರುವ ಲಂಕಾ ಇತ್ತೀಚೆಗಿನ ವರದಿ ಬಂದಾಗ 4 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿದೆ.
ಇದೀಗ ಕ್ರೀಸ್ ನಲ್ಲಿರುವ ಪಥುಮ್ ನಿಸಂಕಾ 50 ರನ್ ಮತ್ತು ಚರಿತ ಅಸಲಂಕಾ 25 ರನ್ ಗಳಿಸಿ ಟೀಂ ಇಂಡಿಯಾ ದಾಳಿಗೆ ಪ್ರತಿರೋಧ ತೋರುತ್ತಿದ್ದಾರೆ. ಹಾಗಿದ್ದರೂ ಲಂಕಾ ಇನ್ನೂ 417 ರನ್ ಗಳ ಹಿನ್ನಡೆಯಲ್ಲಿದೆ. ಭಾರತದ ಪರ ರವಿಚಂದ್ರನ್ ಅಶ್ವಿನ್ 2, ರವೀಂದ್ರ ಜಡೇಜಾ ಮತ್ತು ಜಸ್ಪ್ರೀತ್ ಬುಮ್ರಾ ತಲಾ 1 ವಿಕೆಟ್ ಕಬಳಿಸಿದ್ದಾರೆ.