Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

South Africa vs India: ಜೋತು ಬಿದ್ದ ಹೊಟ್ಟೆ, ರೋಹಿತ್ ಶರ್ಮಾ ಗರ್ಭಿಣಿನಾ?!

South Africa vs India: ಜೋತು ಬಿದ್ದ ಹೊಟ್ಟೆ, ರೋಹಿತ್ ಶರ್ಮಾ ಗರ್ಭಿಣಿನಾ?!
ಕೇಪ್ ಟೌನ್ , ಗುರುವಾರ, 4 ಜನವರಿ 2024 (09:16 IST)
Photo Courtesy: Twitter
ಕೇಪ್ ಟೌನ್: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಫಿಟ್ನೆಸ್ ಮತ್ತು ಅವರ ದೇಹ ತೂಕದ ಬಗ್ಗೆ ಆಗಾಗ ಟ್ರೋಲ್ ಗೊಳಗಾಗುತ್ತಲೇ ಇರುತ್ತಾರೆ.

ಇದೀಗ ನಡೆಯುತ್ತಿರುವ ಭಾರತ ಮತ್ತು ದ.ಆಫ್ರಿಕಾ ನಡುವಿನ ಟೆಸ್ಟ್ ಪಂದ್ಯದ ವೇಳೆ ಎಲ್ಲರೂ ರೋಹಿತ್ ನಾಯಕತ್ವದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದರೆ, ಕೆಲವರ ಕಣ್ಣು ಅವರ ಜೋತು ಬಿದ್ದ ಹೊಟ್ಟೆ ಮೇಲೆ ಬಿದ್ದಿದೆ.

ರೋಹಿತ್ ಹೊಟ್ಟೆ ಬೆಳೆಸಿಕೊಂಡು ಅವರ ಉಬ್ಬು ಹೊಟ್ಟೆ ಸ್ಪಷ್ಟವಾಗಿ ಕಾಣುತ್ತಿತ್ತು. ಇದನ್ನು ನೋಡಿದ ನೆಟ್ಟಿಗರಲ್ಲಿ ಕೆಲವರು ರೋಹಿತ್ ಶರ್ಮಾಗೆ ಅಭಿನಂದನೆ ಸಲ್ಲಿಸಲೇಬೇಕು. ‘ಗರ್ಭಿಣಿ’ಯಾಗಿದ್ದರೂ ಇಂತಹ ಸೂಕ್ಷ್ಮ ಸಮಯದಲ್ಲೂ ಆಡುತ್ತಿದ್ದಾರಲ್ಲಾ ಎಂದು ವ್ಯಂಗ್ಯ ಮಾಡಿದ್ದಾರೆ.

ಆದರೆ ಇದೇ ಪಂದ್ಯದಲ್ಲಿ ಜಡೇಜಾ ಜೊತೆ ಬೌಂಡರಿ ಬಳಿ ಹೋಗುತ್ತಿದ್ದ ಚೆಂಡು ತಡೆಯಲು ಓಡಿದ ರೋಹಿತ್ ಮೊದಲಿಗರಾಗಿ ಚೆಂಡು ತಡೆದ ವಿಡಿಯೋ ಕೂಡಾ ವೈರಲ್ ಆಗಿದ್ದು, ಇದಕ್ಕೆ ರೋಹಿತ್ ಫ್ಯಾನ್ಸ್ ನಮ್ಮ ಕ್ಯಾಪ್ಟನ್ ಎಷ್ಟು ಫಿಟ್ ಎಂದು ಟೀಕಾಕಾರರಿಗೆ ಈಗ ಗೊತ್ತಾಗಿರಬಹುದು ಎಂದು ತಿರುಗೇಟು ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

IND vs SA test: ಎರಡನೇ ಟೆಸ್ಟ್ ಎರಡೇ ದಿನಕ್ಕೆ ಮುಕ್ತಾಯ?