Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

IND vs SA test: ಎರಡನೇ ಟೆಸ್ಟ್ ಎರಡೇ ದಿನಕ್ಕೆ ಮುಕ್ತಾಯ?

IND vs SA test: ಎರಡನೇ ಟೆಸ್ಟ್ ಎರಡೇ ದಿನಕ್ಕೆ ಮುಕ್ತಾಯ?
ಕೇಪ್ ಟೌನ್ , ಗುರುವಾರ, 4 ಜನವರಿ 2024 (08:40 IST)
ಕೇಪ್ ಟೌನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯವನ್ನು ಗಮನಿಸಿದರೆ ಎರಡೇ ದಿನಕ್ಕೆ ಈ ಪಂದ್ಯ ಮುಗಿಯುವ ಲಕ್ಷಣ ಕಾಣುತ್ತಿದೆ.

ಮೊದಲ ದಿನದಲ್ಲಿ ಉಭಯ ತಂಡಗಳ ಒಟ್ಟು 23 ವಿಕೆಟ್ ಉರುಳಿದೆ. ಎರಡೂ ತಂಡಗಳು ಮೊದಲ ದಿನವೇ ಮೊದಲ ಇನಿಂಗ್ಸ್ ಮುಗಿಸಿದೆ. ಜೊತೆಗೆ ಭಾರತ ತಂಡ ರನ್ ಗಳಿಸದೇ 6 ವಿಕೆಟ್ ಕಳೆದುಕೊಂಡು ಟೆಸ್ಟ್ ಕ್ರಿಕೆಟ್ ನಲ್ಲೇ ಇದೇ ಮೊದಲ ಬಾರಿಗೆ ಎಂಬ ಇತಿಹಾಸ ಸೃಷ್ಟಿಯಾಗಿದೆ. 153 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಭಾರತ ಬಳಿಕ ಸತತ 6 ವಿಕೆಟ್ ಕಳೆದುಕೊಂಡು 153 ರನ್ ಗಳಿಗೇ ಆಲೌಟ್ ಆಗಿದೆ. ಇದನ್ನೆಲ್ಲಾ ಗಮನಿಸಿದರೆ ಎರಡನೇ ದಿನವೇ ಈ ಪಂದ್ಯ ಮುಗಿಯಬಹುದೇನೋ ಎಂಬ ಅನುಮಾನ ಶುರುವಾಗಿದೆ.

ನಿನ್ನೆಯ ದಿನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಸೌತ್ ಆಫ್ರಿಕಾ ಮೊಹಮ್ಮದ್ ಸಿರಾಜ್ ದಾಳಿಗೆ ಸಿಲುಕಿ ಮೊದಲ ಇನಿಂಗ್ಸ್ ನಲ್ಲಿ ಕೇವಲ 55 ರನ್ ಗಳಿಗೆ ಆಲೌಟ್ ಆಗಿತ್ತು. ಈ ಮೊತ್ತ ಬೆನ್ನತ್ತಿದ ಟೀಂ ಇಂಡಿಯಾ 153 ರನ್ ಗಳಿಗೆ ಆಲೌಟ್ ಆಗುವ ಮೂಲಕ 98 ರನ್ ಗಳ ಮುನ್ನಡೆ ಪಡೆಯಿತು. ವಿರಾಟ್ ಕೊಹ್ಲಿ 46, ರೋಹಿತ್ ಶರ್ಮಾ 39, ಶುಬ್ಮನ್ ಗಿಲ್ 36 ಹಾಗೂ ಕೆಎಲ್ ರಾಹುಲ್ 8 ರನ್ ಗಳಿಸಿದರು. ಉಳಿದ ಎಲ್ಲಾ 6 ಬ್ಯಾಟಿಗರದ್ದು ಶೂನ್ಯ ಸಂಪಾದನೆ.

ಇದೀಗ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಆಫ್ರಿಕಾ 62 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಿದೆ. ಈಗಲೂ ಭಾರತದ ಮೊದಲ ಇನಿಂಗ್ಸ್ ಮೊತ್ತದಿಂದ 36 ರನ್ ಹಿನ್ನಡೆಯಲ್ಲಿದೆ. ಹಾಗಿದ್ದರೂ ಈ ಪಿಚ್ ನಲ್ಲಿ ಆಫ್ರಿಕಾ 100 ರನ್ ಗಳ ಗುರಿ ನೀಡಿದರೂ ಭಾರತಕ್ಕೆ ಚೇಸಿಂಗ್ ಪ್ರಯಾಸಕರವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

IND vs SA test: ಮೈದಾನದಲ್ಲಿ ‘ರಾಮ’ನಾದ ವಿರಾಟ್ ಕೊಹ್ಲಿ