ಇಸ್ಲಾಮಾಬಾದ್: ಭಯೋತ್ಪಾದಕರ ಸ್ವರ್ಗ ಎಂದೇ ಕರೆಯಿಸಿಕೊಳ್ಳುವ ಪಾಕಿಸ್ತಾನದಲ್ಲಿ ವಿಶ್ವದ ಘಟಾನುಘಟಿ ತಂಡಗಳು ಕ್ರಿಕೆಟ್ ಆಡಲೂ ಭಯಪಡುತ್ತವೆ. ಇದರ ನಡುವೆ ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಎಹ್ಸಾನ್ ಮಣಿ ಭಾರತವೇ ಕ್ರಿಕೆಟಿಗರಿಗೆ ಸುರಕ್ಷಿತವಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.
ಇತ್ತೀಚೆಗೆ ಶ್ರೀಲಂಕಾ ವಿರುದ್ಧ ತವರಿನಲ್ಲಿ ಟೆಸ್ಟ್ ಸರಣಿ ಯಶಸ್ವಿಯಾಗಿ ಆಯೋಜಿಸಿದ ಬಳಿಕ ಪಿಸಿಬಿ ಅಧ‍್ಯಕ್ಷರು ತಮ್ಮನ್ನು ತಾವು ಕೊಚ್ಚಿಕೊಂಡಿದ್ದಾರೆ.
‘ಟೆಸ್ಟ್ ಸರಣಿ ಆಯೋಜಿಸುವ ಮೂಲಕ ನಾವು ಪಾಕಿಸ್ತಾನ ಕ್ರಿಕೆಟ್ ಆಡುವುದಕ್ಕೆ ಸುರಕ್ಷಿತ ಎಂದು ಸಾಬೀತುಪಡಿಸಿದ್ದೇವೆ. ಹಾಗೆ ನೋಡಿದರೆ ಭಾರತದಲ್ಲೇ ಭದ್ರತೆಯ ದೃಷ್ಟಿಯಿಂದ ಕ್ರಿಕೆಟ್ ಆಡುವುದು ಸುರಕ್ಷಿತವಲ್ಲ’ ಎಂದು ಟಾಂಗ್ ನೀಡಿದ್ದಾರೆ.