Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಫಾರ್ಮ್ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಹತ್ವದ ಹೇಳಿಕೆ ನೀಡಿದ್ದಾರೆ.
ಕೊಹ್ಲಿ ಫಾರ್ಮ್ ಬಗ್ಗೆ ಹಲವು ಮಾಜಿ ಕ್ರಿಕೆಟಿಗರು ತೀವ್ರ ಟೀಕೆ ಮಾಡುತ್ತಿದ್ದಾರೆ. ಈ ನಡುವೆ ಗಂಗೂಲಿ ಟೀಕಾಕಾರರಿಗೆ ತಕ್ಕ ತಿರುಗೇಟು ನೀಡಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅವರು ಮಾಡಿದ ರನ್ ನೋಡಿ. ಸದ್ಯಕ್ಕೆ ಅವರಿಗೆ ಕಠಿಣ ದಿನಗಳು ಎದುರಾಗಿರಬಹುದು, ಅದು ಅವರಿಗೂ ಗೊತ್ತು. ಕೊಹ್ಲಿ ಶ್ರೇಷ್ಠ ಆಟಗಾರ. ಫಾರ್ಮ್ ಗೆ ಮರಳುವುದು ಹೇಗೆಂದು ಅವರಿಗೆ ಗೊತ್ತು. ಕಳೆದ 12 ವರ್ಷಗಳಿಂದ ಅವರು ಅದನ್ನೇ ಮಾಡುತ್ತಿದ್ದಾರೆ. ವಿರಾಟ್ ಕೊಹ್ಲಿ ಮಾತ್ರ ಅದನ್ನು ಮಾಡಲು ಸಾಧ್ಯ ಎಂದು ಕೊಹ್ಲಿ ಪರವಾಗಿ ಗಂಗೂಲಿ ಮಾತನಾಡಿದ್ದಾರೆ.