ಢಾಕಾ: ಬಾಂಗ್ಲಾದೇಶ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ ಶುಬ್ನಂ ಗಿಲ್ ಮತ್ತು ಐದು ವಿಕೆಟ್ ಕಬಳಿಸಿ ಪಂದ್ಯ ಶ್ರೇಷ್ಠರಾದರೂ ಕುಲದೀಪ್ ಯಾದವ್ ಮುಂದಿನ ಪಂದ್ಯಗಳಲ್ಲಿ ಅವಕಾಶ ಸಿಗುತ್ತದೆಂಬ ಯಾವುದೇ ಗ್ಯಾರಂಟಿ ಇಲ್ಲ!
ಬಾಂಗ್ಲಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯಕ್ಕೆ ನಾಯಕ ರೋಹಿತ್ ಶರ್ಮಾ ಪುನರಾಗಮನವಾಗಬಹುದು. ಆಗ ಅನಿವಾರ್ಯವಾಗಿ ಶುಬ್ನಂ ಗಿಲ್ ತಮ್ಮ ಸ್ಥಾನ ಬಿಟ್ಟುಕೊಡಬೇಕಾದೀತು. ಕೆಎಲ್ ರಾಹುಲ್ ಉಪನಾಯಕ ಎಂಬ ಕಾರಣಕ್ಕೆ ಸ್ಥಾನ ಉಳಿಸಿಕೊಳ್ಳಬಹುದು.
ಇನ್ನು, ಮೊದಲ ಪಂದ್ಯದಲ್ಲಿ ಆಲ್ ರೌಂಡರ್ ಆಟ ಪ್ರದರ್ಶಿಸಿದ್ದ ಕುಲದೀಪ್ ಯಾದವ್ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಅವಕಾಶ ಪಡೆದರೂ ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಅವಕಾಶ ಸಿಗುವುದು ಅನುಮಾನ. ಈ ವೇಳೆಗೆ ತಂಡಕ್ಕೆ ಆಲ್ ರೌಂಡರ್ ರವೀಂದ್ರ ಜಡೇಜಾ ಪುನರಾಗಮನವಾಗಲಿದೆ. ಹೀಗಾಗಿ ಕುಲದೀಪ್ ಅವಕಾಶ ವಂಚಿತರಾಗಬೇಕಾದೀತು.