ಅಹಮ್ಮದಾಬಾದ್: ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಅಹಮ್ಮದಾಬಾದ್ ಗೆ ಬಂದಿಳಿದಿರುವ ಟೀಂ ಇಂಡಿಯಾದಲ್ಲಿ ಕೊರೋನಾ ಸೋಂಕು ಆತಂಕ ಮೂಡಿಸಿದೆ.
ಶಿಖರ್ ಧವನ್ ಸೇರಿದಂತೆ ಒಟ್ಟಾರೆ ಎಂಟು ಕ್ರಿಕೆಟಿಗರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಸೋಂಕಿತರಾಗಿರುವ ಧವನ್, ಶ್ರೇಯಸ್ ಐಯರ್, ಋತುರಾಜ್ ಗಾಯಕ್ ವಾಡ್, ಅಕ್ಸರ್ ಪಟೇಲ್, ನವದೀಪ್ ಸೈನಿ ಮೊದಲ ಪಂದ್ಯದಿಂದ ಔಟಾಗಿದ್ದಾರೆ.
ಇದೀಗ ಶಿಖರ್ ಧವನ್ ಅಭಿಮಾನಿಗಳಿಗೆ ಸಂದೇಶ ನೀಡಿದ್ದು, ತಾವು ಚೇತರಿಸಿಕೊಳ್ಳುತ್ತಿದ್ದು, ಅಭಿಮಾನಿಗಳ ಹಾರೈಕೆಗೆ ಅಭಾರಿಯಾಗಿದ್ದೇನೆ ಎಂದಿದ್ದಾರೆ.