Publish Date: Thu, 03 Feb 2022 (10:14 IST)
Updated Date: Thu, 03 Feb 2022 (10:16 IST)
ಅಹಮ್ಮದಾಬಾದ್: ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಏಕದಿನ ಸರಣಿಗೆ ಅಹಮ್ಮದಾಬಾದ್ ಗೆ ಬಂದಿಳಿದಿರುವ ಟೀಂ ಇಂಡಿಯಾದ ಮೂವರು ಕ್ರಿಕೆಟಿಗರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಆರಂಭಿಕ ಶಿಖರ್ ಧವನ್, ಋತುರಾಜ್ ಗಾಯಕ್ ವಾಡ್, ಮಧ‍್ಯಮ ಕ್ರಮಾಂಕದ ಶ್ರೇಯಸ್ ಐಯರ್ ಗೆ ಕೊರೋನಾ ಸೋಂಕು ದೃಢಪಟ್ಟಿದೆ. ಅಲ್ಲದೆ, ಆಡಳಿತ ಸಿಬ್ಬಂದಿಗೂ ಕೊರೋನಾ ಸೋಂಕು ತಗುಲಿದೆ.
ಹೀಗಾಗಿ ಮೊದಲ ಏಕದಿನ ಪಂದ್ಯಕ್ಕೆ ಮೂವರು ಕ್ರಿಕೆಟಿಗರು ಅಲಭ್ಯರಾಗಲಿದ್ದಾರೆ. ಉಳಿದ ಕ್ರಿಕೆಟಿಗರಿಗೆ ಸೋಂಕು ತಗಲದಂತೆ ಎಚ್ಚರಿಕೆ ವಹಿಸಲಾಗುತ್ತಿದೆ.