Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ಒತ್ತಡಕ್ಕೆ ಮಣಿದು ಈ ಕೆಲಸ ಮಾಡಲು ಒಪ್ಪಿಕೊಂಡರಂತೆ ಕ್ರಿಕೆಟಿಗ ಸೆಹ್ವಾಗ್

ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ಒತ್ತಡಕ್ಕೆ ಮಣಿದು ಈ ಕೆಲಸ ಮಾಡಲು ಒಪ್ಪಿಕೊಂಡರಂತೆ ಕ್ರಿಕೆಟಿಗ ಸೆಹ್ವಾಗ್
ನವದೆಹಲಿ , ಗುರುವಾರ, 2 ಆಗಸ್ಟ್ 2018 (09:39 IST)
ನವದೆಹಲಿ: ರಾಷ್ಟ್ರೀಯ ಉದ್ದೀಪನಾ ಔಷಧಿ ನಿರೋಧಕ ಪ್ರಾಧಿಕಾರ (ನಾಡಾ) ಸದಸ್ಯರಾಗಿದ್ದೂ ಸಭೆಗೆ ಹಾಜರಾಗದ ಬಗ್ಗೆ ವಿವಾದವಾಗುತ್ತಿದ್ದಂತೆ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಪ್ರತಿಕ್ರಿಯೆ ನೀಡಿದ್ದಾರೆ.

ನಾಡಾ ಸಭೆಗೆ ಆಗಮಿಸದ ಬಗ್ಗೆ ಬಂದ ಟೀಕೆಗಳಿಗೆ ಉತ್ತರಿಸಿರುವ ಸೆಹ್ವಾಗ್ ‘ನನಗೆ ಈ ಹುದ್ದೆ ಸ್ವೀಕರಿಸುವುದೇ ಇಷ್ಟವಿರಲಿಲ್ಲ. ನನ್ನ ಪ್ರಕಾರ ಒಲಿಂಪಿಕ್ ಆಟಗಾರರು ಮಾತ್ರ ಈ ಸಮಿತಿಗೆ ಸದಸ್ಯರಾಗಬೇಕೇ ಹೊರತು ಕ್ರಿಕೆಟಿಗರಲ್ಲ. ಹಾಗಿದ್ದರೂ ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ಒತ್ತಾಯಕ್ಕೆ ಹುದ್ದೆ ಒಪ್ಪಿಕೊಂಡೆ’ ಎಂದು ಸ್ಪಷ್ಟನೆ ನೀಡಿದ್ದಾರೆ.

ಕಳೆದ ವರ್ಷ ಅಂದರೆ 2017 ರ ನವಂಬರ್ ನಲ್ಲಿ ಸೆಹ್ವಾಗ್ ಗೆ ಈ ಸಮಿತಿಯಲ್ಲಿ ಸ್ಥಾನ ನೀಡಲಾಗಿತ್ತು. ಆದರೆ ಇದುವರೆಗೆ ಸೆಹ್ವಾಗ್ ಯಾವುದೇ ಸಭೆಗೆ ಹಾಜರಾಗಿಲ್ಲ. ಈ ಬಗ್ಗೆ ಟೀಕೆಗಳು ಬಂದ ಹಿನ್ನಲೆಯಲ್ಲಿ ಸೆಹ್ವಾಗ್ ಸ್ಪಷ್ಟನೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿಯ ಸೈಕಲ್ ಸ್ಟಂಟ್ ಭಾರೀ ವೈರಲ್!