ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 2019ರ ವಿಶ್ವಕಪ್ ತಂಡದಲ್ಲಿ ಇರಬೇಕೆ..? ಬೇಡವೋ ಎಂಬ ಬಗ್ಗೆ ಆಯ್ಕೆ ಸಮಿತಿ ಗೊಂದಲದಲ್ಲಿರುವ ಬಿನ್ನಲ್ಲೇ ಧೋನಿ ಸ್ಥಾನ ತುಂಬಬಲ್ಲ ಆಟಗಾರನನ್ನ ಇನ್ನೂ ಹುಡುಕಬೇಕಿದೆ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.
`ಧೋನಿಯ ಸ್ಥಾನ ತುಂಬಬಲ್ಲ ಆಟಗಾರರು ಸದ್ಯಕ್ಕಂತೂ ಯಾರೂ ಇಲ್ಲ. ರಿಶಬ್ ಪಂತ್ ಒಳ್ಳೆಯ ಆಟಗಾರ, ಆದರೆ, ಧೋನಿ ಸ್ಥಾನ ತುಂಬಲು ರಿಶಬ್`ಗೆ ಬಹಳಷ್ಟು ಸಮಯ ಬೇಕಿದೆ. ಅದು 2019ರ ವಿಶ್ವಕಪ್ ಬಳಿಕವೇ ಸಾಧ್ಯ. ಆ ಬಳಿಕವಷ್ಟೇ ಧೋನಿಯ ಸ್ಥಾನವನ್ನ ತುಂಬುವ ಕುರಿತು ಯೋಚಿಸಬಹುದಾಗಿದೆ. ಅಲ್ಲಿಯವರೆಗೆ ರಿಶಬ್ ಪಂತ್ಯ ನುಭವ ಪಡೆಯಲಿ ಎಂದು ನ್ಯೂಸ್ 18 ಸಂದರ್ಶನದಲ್ಲಿ ಸೆಹ್ವಾಗ್ ಹೇಳಿದ್ದಾರೆ
`ಧೋನಿ ರನ್ ಸ್ಕೋರ್ ಮಾಡುತ್ತಿದ್ದಾರಾ..? ಇಲ್ಲವೇ..? ಎಂಬ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ. 2019ರ ವಿಶ್ವಕಪ್`ವರೆಗೆ ಧೋನಿ ಫಿಟ್ ಆಗಿರುವಂತೆ ಪ್ರಾರ್ಥಿಸಬೇಕು. ಮಧ್ಯಮ ಮತ್ತು ಕೆಳ ಮಧ್ಯಮ ಕ್ರಮಾಂಕದಲ್ಲಿ ಧೋನಿ ಹೊಂದಿರುವ ಅನುಭವ ಯಾರಿಗೂ ಇಲ್ಲ ಎಂದು ಸೆಹ್ವಾಗ್ ಹೇಳಿದ್ಧಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ