Select Your Language

Notifications

webdunia
webdunia
webdunia
webdunia

Video: ಸೋತಿದ್ದಕ್ಕೆ ಕೋಪ, ತಾಪಗಳಿಲ್ಲ: ಬದಲಾದ್ರಾ ಎಲ್ಎಸ್ ಜಿ ಮಾಲಿಕ ಸಂಜೀವ್ ಗೊಯೆಂಕಾ

Sanjeev Goenka-Rishabh Pant
Photo Credit: X
ಲಕ್ನೋ: ತಮ್ಮ ತಂಡ ಸೋತಾಗಲೆಲ್ಲಾ ಕ್ಯಾಪ್ಟನ್ ಜೊತೆ ಕೋಪ, ತಾಪ ಪ್ರದರ್ಶಿಸುವ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಸಂಜೀವ್ ಗೊಯೆಂಕಾ ನಿನ್ನೆಯ ವರ್ತನೆ ಶಾಕಿಂಗ್ ಅಗಿದೆ.

ನಿನ್ನೆ ರಾಜಸ್ಥಾನ್ ರಾಯಲ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 40 ರನ್ ಗಳಿಂದ ಪಂದ್ಯ ಸೋತಿದೆ. ಈ ಪಂದ್ಯ ಸೋತ ಬಳಿಕ ಲಕ್ನೋ ಮಾಲಿಕ ಸಂಜೀವ್ ಗೊಯೆಂಕಾ ಮತ್ತು ಕ್ಯಾಪ್ಟನ್ ರಿಷಭ್ ಪಂತ್ ಮೈದಾನದಲ್ಲಿ ಮಾತನಾಡಿದ್ದಾರೆ.

ಸಾಮಾನ್ಯವಾಗಿ ಪಂದ್ಯ ಸೋತಾಗ ಸಂಜೀವ್ ಗೊಯೆಂಕಾ ಮೈದಾನವೆಂದೂ ನೋಡದೇ ನಾಯಕನ ಬಳಿ ಸಿಟ್ಟಿನಿಂದಲೇ ತರಾಟೆಗೆ ತೆಗೆದುಕೊಳ್ಳುತ್ತಾರೆ. ಈ ವಿಚಾರವಾಗಿ ಸಂಜೀವ್ ಗೊಯೆಂಕಾ ಸಾಕಷ್ಟು ಟೀಕೆಗೊಳಗಾಗಿದ್ದಾರೆ. ಏನೇ ಇದ್ದರೂ ನಾಲ್ಕು ಗೋಡೆಗಳ ಮಧ್ಯೆ ಇರಬೇಕು. ನಾಯಕನನ್ನು ಈ ರೀತಿ ಅವಮಾನಿಸುವುದು ಸರಿಯಲ್ಲ . ಇದಕ್ಕೆ ಬಿಸಿಸಿಐ ಬುದ್ಧಿ ಹೇಳಬೇಕು ಎಂದು ಅಭಿಮಾನಿಗಳು ಆಗ್ರಹಿಸಿದ್ದರು.

ಇದೀಗ ಯಾರು ಬುದ್ಧಿ ಹೇಳಿದ್ದಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಸಂಜೀವ್ ಗೊಯೆಂಕಾ ನಿನ್ನೆ ಪಂದ್ಯ ಸೋತ ಬಳಿಕವೂ ರಿಷಭ್ ಜೊತೆ ನಗು ನಗುತ್ತಲೇ ತಮಾಷೆ ಮಾಡಿಕೊಂಡು ಮಾತನಾಡುತ್ತಿದ್ದಿದ್ದು ಕಂಡುಬಂದಿದೆ. ಇದನ್ನು ನೋಡಿ ಅಭಿಮಾನಿಗಳು ಸಂಜೀವ್ ಗೊಯೆಂಕಾ ಕೊನೆಗೂ ಬದಲಾದ್ರಾ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ.

 
 
 
 
 
 
 
 
 
 
 
 
 
 
 

A post shared by Pravej Alam (@ipravej_01)


Share this Story:

Follow Webdunia kannada

ಮುಂದಿನ ಸುದ್ದಿ

IPL 2026: ಇಂದು ಐಪಿಎಲ್ ಅಭಿಮಾನಿಗಳಿಗೆ ಹಬ್ಬ, ಫ್ಯಾನ್ಸ್ ಕಾಯುತ್ತಿದ್ದ ಗಳಿಗೆ ಬಂದೇ ಬಿಡ್ತು