ಧರ್ಮಶಾಲಾ: ಅಪ್ಪನಂತೇ ಅತ್ಯುತ್ತಮ ಕ್ರಿಕೆಟಿಗನಾಗಲು ಪರಿಶ್ರಮ ಪಡುತ್ತಿರುವ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಇದೀಗ ಧರ್ಮಶಾಲಾದಲ್ಲಿ ಕಠಿಣ ತರಬೇತಿ ಪಡೆಯುತ್ತಿದ್ದಾರೆ.
ಅರ್ಜುನ್ ತರಬೇತಿ ವೀಕ್ಷಿಸಲು ಸ್ವತಃ ಸಚಿನ್ ಮತ್ತು ಪತ್ನಿ ಅಂಜಲಿ ಧರ್ಮಶಾಲಾಗೆ ಬಂದಿಳಿದಿದ್ದಾರೆ. ಇಲ್ಲಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಅರ್ಜುನ್ ತರಬೇತಿ ಪಡೆಯುತ್ತಿದ್ದಾರೆ.
ಮಗನ ಜತೆಗೆ ಮೂರು ದಿನಗಳ ಕಾಲ ತಂಗಲು ಸಚಿನ್ ಪತ್ನಿ ಸಮೇತರಾಗಿ ದೆಹಲಿ ಮಾರ್ಗವಾಗಿ ಬಂದಿಳಿದಿದ್ದಾರೆ. ಈ ಭೇಟಿ ವೇಳೆ ಟಿಬೆಟಿಯನ್ ಧರ್ಮಗುರು ದಲೈಲಾಮಾರನ್ನು ಭೇಟಿ ಮಾಡುವ ಕಾರ್ಯಕ್ರಮವೂ ಸಚಿನ್ ಗಿದೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.