ರಾಂಚಿ: ಭಾರತ ಮತ್ತು ದ.ಆಫ್ರಿಕಾ ನಡುವೆ ರಾಂಚಿಯಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿ ಉಮೇಶ್ ಯಾದವ್ ಬ್ಯಾಟ್ ನಿಂದ ವಿಶ್ವ ದಾಖಲೆ ಮಾಡಿದ್ದಾರೆ.
ಸಾಮಾನ್ಯವಾಗಿ ಉಮೇಶ್ ಬ್ಯಾಟಿಂಗ್ ನಲ್ಲಿ ಹೇಳಿಕೊಳ್ಳುವಂತಹ ರನ್ ಮಾಡುವುದಿಲ್ಲ. ಅವರು ಜಡೇಜಾರಂತೆ ಉತ್ತಮ ಬ್ಯಾಟ್ಸ್ ಮನ್ ಅಲ್ಲ. ವೇಗದ ಬೌಲಿಂಗ್ ನಲ್ಲಷ್ಟೇ ಎದುರಾಳಿಗಳಿಗೆ ಕಂಟಕ ತರುತ್ತಾರೆ.
ಆದರೆ ದ್ವಿತೀಯ ದಿನದಾಟದಲ್ಲಿ ಕೇವಲ 10 ಬಾಲ್ ಗಳಿಂದ 30 ರನ್ ಗಳಿಸಿ ವಿಶ್ವದಾಖಲೆಯನ್ನೇ ಮಾಡಿದರು. ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ವೇಗವಾಗಿ 30 ಪ್ಲಸ್ ರನ್ ಮಾಡಿದ ನ್ಯೂಜಿಲೆಂಡ್ ನ ಸ್ಟೀಫನ್ ಫ್ಲೆಮಿಂಗ್ ದಾಖಲೆಯನ್ನು (11 ಬಾಲ್ ಗಳಲ್ಲಿ 30 ರನ್) ಉಮೇಶ್ ಮಾಡಿದರು. ಇದರಲ್ಲಿ 5 ಸಿಕ್ಸರ್ ಕೂಡಾ ಸೇರಿತ್ತು. ಉಮೇಶ್ ಹೊಡೆಬಡಿಯ ಇನಿಂಗ್ಸ್ ನ್ನು ಕೊಂಡಾಡಿರುವ ಟ್ವಿಟರಿಗರು ಇದು ವೀರೇಂದ್ರ ಸೆಹ್ವಾಗ್ ಗೆ ತಕ್ಕ ಬರ್ತ್ ಡೇ ಗಿಫ್ಟ್ ಎಂದಿದ್ದಾರೆ.