Publish Date: Sun, 26 Jun 2022 (08:30 IST)
Updated Date: Sun, 26 Jun 2022 (09:03 IST)
ಲೀಸೆಸ್ಟರ್: ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಆಡಿದ್ದ ನಾಯಕ ರೋಹಿತ್ ಶರ್ಮಾಗೆ ಕೊರೋನಾ ಪಾಸಿಟಿವ್ ಆಗಿದೆ. ಇದು ಟೀಂ ಇಂಡಿಯಾ ಪಾಳಯದಲ್ಲಿ ಆತಂಕ ಸೃಷ್ಟಿಸಿದೆ.
ಜುಲೈ 1 ರಿಂದ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯವಾಡಬೇಕಿದೆ. ಇದಕ್ಕೆ ಮೊದಲು ರೋಹಿತ್ ಚೇತರಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಒಂದು ವೇಳೆ ಅವರು ತಂಡಕ್ಕೆ ಅಲಭ್ಯರಾದರೆ ಅದು ದೊಡ್ಡ ಹೊಡೆತ ನೀಡಲಿದೆ.
ಈಗಾಗಲೇ ಟೀಂ ಇಂಡಿಯಾ ಖಾಯಂ ಓಪನರ್ ಕೆಎಲ್ ರಾಹುಲ್ ಸೇವೆ ಕಳೆದುಕೊಂಡಿದೆ. ಈಗ ರೋಹಿತ್ ಕೂಡಾ ಇಲ್ಲದೇ ಹೋದರೆ ಟೀಂ ಇಂಡಿಯಾ ಬ್ಯಾಟಿಂಗ್ ದುರ್ಬಲವಾಗಲಿದೆ. ರೋಹಿತ್ ಸದ್ಯಕ್ಕೆ ಐಸೋಲೇಷನ್ ನಲ್ಲಿದ್ದಾರೆ. ಇದಕ್ಕೂ ಮೊದಲು ರೋಹಿತ್ ಅಭ್ಯಾಸ ಪಂದ್ಯದಲ್ಲಿ ಆಡಿದ್ದರಿಂದ ಇತರ ಕ್ರಿಕೆಟಿಗರೂ ಸೋಂಕಿಗೊಳಗಾಗುವ ಅಪಾಯದಲ್ಲಿದ್ದಾರೆ.