Webdunia - Bharat's app for daily news and videos

Install App

ಟಿ20 ವಿಶ್ವಕಪ್ ಟ್ರೋಫಿ ಜೊತೆಗೇ ಮಲಗಿ ನಿದ್ರಿಸಿದ ರೋಹಿತ್ ಶರ್ಮಾ

Krishnaveni K
ಸೋಮವಾರ, 1 ಜುಲೈ 2024 (08:58 IST)
Photo Credit: Instagram
ಬಾರ್ಬಡೋಸ್: ದಕ್ಷಿಣ ಆಫ್ರಿಕಾ ವಿರುದ್ಧ ಫೈನಲ್ ಪಂದ್ಯದಲ್ಲಿ ಗೆದ್ದು 13 ವರ್ಷಗಳ ಬಳಿಕ ಟೀಂ ಇಂಡಿಯಾ ವಿಶ್ವಕಪ್ ಗೆಲುವು ಸಾಧಿಸಿದಾಗ ಇಡೀ ಭಾರತವೇ ನಿದ್ರೆಯಿಲ್ಲದೇ ಸಂಭ್ರಮಾಚರಣೆಯಲ್ಲಿ ಮುಳುಗಿತ್ತು. ಹೀಗಿರುವಾಗ ಆಟಗಾರರ ಸ್ಥಿತಿ ಹೇಗಿರಬೇಡ?

ಟೀಂ ಇಂಡಿಯಾ ಕ್ರಿಕೆಟಿಗರೂ ಇದಕ್ಕೆ ಹೊರತಾಗಿರಲಿಲ್ಲ. ರಾತ್ರಿಯಿಡೀ ಸೆಲೆಬ್ರೇಷನ್ ಮೂಡ್ ನಲ್ಲಿದ್ದರು. ಅದರಲ್ಲೂ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ವಿಶ್ವಕಪ್ ಟ್ರೋಫಿಯನ್ನು ಪಕ್ಕದಲ್ಲಿಟ್ಟುಕೊಂಡೇ ನಿದ್ರಿಸಿದ್ದಾರಂತೆ. ಇದನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಸಮೇತ ಹಂಚಿಕೊಂಡಿದ್ದಾರೆ. ತಮ್ಮ ಬೆಡ್ ಪಕ್ಕದಲ್ಲೇ ಟ್ರೋಫಿ ಇಟ್ಟುಕೊಂಡು ಮಲಗಿದ್ದಾರೆ.

ಈ ವಿಶ್ವಕಪ್ ರೋಹಿತ್ ಪಾಲಿಗೆ ಮಹತ್ವದ್ದಾಗಿತ್ತು. ಕಳೆದ ಏಕದಿನ ವಿಶ್ವಕಪ್ ಫೈನಲ್ ಸೋತ ಬಳಿಕ ತಮ್ಮ ನಾಯಕತ್ವದಲ್ಲಿ ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟೇ ತೀರುವೆ ಎಂದು ರೋಹಿತ್ ಹೇಳಿದ್ದರು. ಅದರಂತೆ ಅವರ ಕನಸು ಇದೀಗ ಟಿ20 ವಿಶ್ವಕಪ್ ಮೂಲಕ ನನಸಾಗಿದೆ.

ಈ ಫೈನಲ್ ಪಂದ್ಯಕ್ಕೆ ಮುನ್ನ ಅವರು ಸರಿಯಾಗಿ ಊಟ, ನಿದ್ರೆಯನ್ನೂ ಮಾಡಿರಲಿಲ್ಲವಂತೆ. ಹೇಗಾದರೂ ಸರಿಯೇ, ವಿಶ್ವಕಪ್ ಗೆಲ್ಲಬೇಕು ಎನ್ನುವುದಷ್ಟೇ ಅವರ ತಲೆಯಲ್ಲಿತ್ತು. ಹೀಗಾಗಿಯೇ ಅವರು ಫೈನಲ್ ಪಂದ್ಯ ಗೆದ್ದ ಬಳಿಕ  ತೀರಾ ಭಾವುಕರಾಗಿದ್ದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025: ಟೈಟನ್ಸ್‌ ವಿರುದ್ಧ ಡೆಲ್ಲಿಗೆ ಮುಖಭಂಗ: ಗುಜರಾತ್‌, ಆರ್‌ಸಿಬಿ, ಪಂಜಾಬ್‌ ತಂಡಗಳಿಗೆ ಪ್ಲೇಆಫ್‌ ಟಿಕೆಟ್‌

ಜೀವಬೆದರಿಕೆ ಬೆನ್ನಲ್ಲೇ ತಿರುಪತಿಗೆ ಟೀ ಇಂಡಿಯಾ ಕೋಚ್ ಭೇಟಿ, ಇಬ್ಬರು ಮಕ್ಕಳನ್ನು ಕೈಹಿಡಿದು ನಡೆದ ಗೌತಮ್ ಗಂಭೀರ್‌

ದೋಹಾ ಡೈಮಂಡ್‌ ಲೀಗ್‌ನಲ್ಲಿ ನೀರಜ್ ಚೋಪ್ರಾ ವಿರುದ್ಧ ಸ್ಪರ್ಧಿಸದ ಪಾಕ್‌ನ ಅರ್ಷದ್‌ ನದೀಮ್, ಕಾರಣ ಹೀಗಿದೆ

ಪಂದ್ಯ ನಿಂತ್ರು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಿರಾಕಲ್‌ಗೆ ಕೊಹ್ಲಿ ಅಭಿಮಾನಿಗಳು ಫುಲ್ ಖುಷ್‌, Video Viral

ಮುಂದಿನ ಸುದ್ದಿ
Show comments