ಮೊಹಾಲಿ: ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೊದಲ ಟಿ20 ಪಂದ್ಯದಲ್ಲಿ ದುರದೃಷ್ಟವಶಾತ್ ನಾಯಕ ರೋಹಿತ್ ಶರ್ಮಾ ರನೌಟ್ ಆಗಿದ್ದರು.
ಬಹಳ ಸಮಯದ ನಂತರ ಟಿ20 ಕ್ರಿಕೆಟ್ ಗೆ ಪುನರಾಗಮನ ಮಾಡಿದ್ದ ರೋಹಿತ್ ಭರ್ಜರಿ ಬ್ಯಾಟಿಂಗ್ ಮಾಡುವ ಹುಮ್ಮಸ್ಸಿನಲ್ಲಿದ್ದರು. ಆದರೆ ಗಿಲ್ ಮಾಡಿದ ತಪ್ಪಿನಿಂದ ರೋಹಿತ್ ರನೌಟ್ ಆದರು.
ಚೆಂಡು ತಳ್ಳಿ ರೋಹಿತ್ ಸಿಂಗಲ್ಸ್ ಗೆ ಓಡಿದರೂ ಇನ್ನೊಂದು ತುದಿಯಲ್ಲಿದ್ದ ಗಿಲ್ ಕ್ರೀಸ್ ನಿಂದ ಕದಲಲಿಲ್ಲ. ಇದರಿಂದಾಗಿ ರೋಹಿತ್ ವಿಕೆಟ್ ಕಳೆದುಕೊಳ್ಳಬೇಕಾಯಿತು. ಇದರಿಂದ ಸಿಟ್ಟಿಗೆದ್ದ ರೋಹಿತ್ ಗಿಲ್ ಕಡೆಗೆ ತಿರುಗಿ ಆಕ್ರೋಶ ಹೊರಹಾಕುತ್ತಾ ಪೆವಿಲಿಯನ್ ಗೆ ತೆರಳಿದರು.
ಈ ಬಗ್ಗೆ ಪಂದ್ಯದ ನಂತರ ಮಾತನಾಡಿರುವ ರೋಹಿತ್ ಕೆಲವು ಹೊತ್ತು ಬ್ಯಾಟ್ ಮಾಡಿ ತಂಡಕ್ಕಾಗಿ ರನ್ ಗಳಿಸಬೇಕು ಎಂದು ಎಲ್ಲರಿಗೂ ಇರುತ್ತದೆ. ಅದು ಸಾಧ‍್ಯವಾಗದೇ ಇದ್ದಾಗ ಹತಾಶೆಗೊಳಗಾಗುವುದು ಸಹಜ ಎಂದಿದ್ದಾರೆ.