ದುಬೈ: ಐಸಿಸಿ ಲೇಟೆಸ್ಟ್ ಟೆಸ್ಟ್ ಶ್ರೇಯಾಂಕ ಪಟ್ಟಿ ಬಿಡುಗಡೆ ಮಾಡಿದ್ದು, ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮತ್ತೆ ಟಾಪ್ 10 ರೊಳಗೆ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ದ.ಆಫ್ರಿಕಾ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಮೂರು ಇನಿಂಗ್ಸ್ ಗಳಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ್ದರು. ಇದರಿಂದಾಗಿ 775 ಅಂಕ ಪಡೆದ ಕೊಹ್ಲಿ 6 ನೇ ಸ್ಥಾನಕ್ಕೇರಿದ್ದಾರೆ. ಈ ಮೊದಲು ಅವರು 9 ನೇ ಸ್ಥಾನದಲ್ಲಿದ್ದರು.
ಇನ್ನು, ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ 14 ನೇ ಸ್ಥಾನದಿಂದ 10 ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಟಾಪ್ 10 ರೊಳಗೆ ಸ್ಥಾನ ಪಡೆದ ಆಟಗಾರರು ಇವರು ಮಾತ್ರ. ವಿಶೇಷವೆಂದರೆ ಕಳೆದ ಒಂದು ವರ್ಷದಿಂದ ಕ್ರಿಕೆಟ್ ಕಣಕ್ಕೇ ಇಳಿಯದಿರುವ ರಿಷಬ್ ಪಂತ್ 13 ನೇ ಸ್ಥಾನದಲ್ಲಿದ್ದಾರೆ.
ತಂಡದ ಪಟ್ಟಿಯಲ್ಲಿ ಆಸ್ಟ್ರೇಲಿಯಾ ನಂ.1, ಭಾರತ ನಂ.2 ನೇ ಸ್ಥಾನದಲ್ಲಿದೆ. ಬೌಲರ್ ಗಳ ಪಟ್ಟಿಯಲ್ಲಿ ಅಗ್ರ 10 ರೊಳಗೆ ಮೂವರು ಸ್ಥಾನ ಪಡೆದಿದ್ದಾರೆ. ಆಫ್ರಿಕಾ ವಿರುದ್ಧ ಆಡಿದ ಒಂದು ಪಂದ್ಯದಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದೇ ಇದ್ದರೂ ರವಿಚಂದ್ರನ್ ಅಶ್ವಿನ್ ನಂ.1 ಸ್ಥಾನ ಕಾಯ್ದುಕೊಂಡಿದ್ದಾರೆ. ಉಳಿದಂತೆ ಜಸ್ಪ್ರೀತ್ ಬುಮ್ರಾ 4 ಮತ್ತು ರವೀಂದ್ರ ಜಡೇಜಾ 5 ನೇ ಕ್ರಮಾಂಕದಲ್ಲಿದ್ದಾರೆ.