Webdunia - Bharat's app for daily news and videos

Install App

ದ್ರಾವಿಡ್ ಇದ್ದರೂ ಅಷ್ಟೇ ಗೌತಮ್ ಗಂಭೀರ್ ಇದ್ದರೂ ಅಷ್ಟೇ ರೋಹಿತ್ ಶರ್ಮಾ ಇರೋದೇ ಹಿಂಗೆ

Krishnaveni K
ಶುಕ್ರವಾರ, 2 ಆಗಸ್ಟ್ 2024 (12:47 IST)
Photo Credit: BCCI
ಕೊಲಂಬೊ: ಟೀಂ ಇಂಡಿಯಾ ಕೋಚ್ ಆಗಿ ಈ ಹಿಂದೆ ರಾಹುಲ್ ದ್ರಾವಿಡ್ ಇದ್ದಾಗಲೂ ಅಷ್ಟೇ ಈಗ ಗೌತಮ್ ಗಂಭೀರ್ ಇದ್ದಾಗಲೂ ಅಷ್ಟೇ. ನಾಯಕ ರೋಹಿತ್ ಶರ್ಮಾ ತಾವು ಇರೋದೇ ಹೀಗೆ ಅಂತಿದ್ದಾರೆ. ಗಂಭಿರ್ ಮತ್ತು ರೋಹಿತ್ ಲೇಟೆಸ್ಟ್ ವಿಡಿಯೋ ಒಂದು ಈಗ ವೈರಲ್ ಆಗಿದೆ.

ಈ ಹಿಂದಿನ ಕೋಚ್ ರಾಹುಲ್ ದ್ರಾವಿಡ್ ತುಂಬಾ ಕೂಲ್ ವ್ಯಕ್ತಿತ್ವದವರಾಗಿದ್ದರು. ವಿವಾದಾತೀತ ವ್ಯಕ್ತಿಯಾಗಿದ್ದ ದ್ರಾವಿಡ್ ಎಲ್ಲರ ಜೊತೆ ಸರಳವಾಗಿರುತ್ತಾರೆ. ಆದರೆ ಈಗ ಕೋಚ್ ಆಗಿ ಬಂದಿರುವ ಗಂಭೀರ್ ಕೋಪ-ತಾಪಗಳು ವಿವಾದಗಳ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಹೀಗಾಗಿ ಅವರ ಜೊತೆ ರೋಹಿತ್ ಹೇಗೆ ಹೊಂದಿಕೊಳ್ಳಬಹುದೋ ಎಂಬ ಆತಂಕ ಅಭಿಮಾನಿಗಳಲ್ಲಿತ್ತು.

ಆದರೆ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಒಂದು ವಿಡಿಯೋ ನೋಡಿದರೆ ರೋಹಿತ್ ಕೋಚ್ ಆಗಿ ದ್ರಾವಿಡ್ ಇದ್ದರೂ ಅಷ್ಟೇ ಗಂಭೀರ್ ಇದ್ದರೂ ಅಷ್ಟೇ ಎಲ್ಲರ ಜೊತೆ ಸುಲಭವಾಗಿ ಹೊಂದಿಕೊಂಡು ಹೋಗುವ ವ್ಯಕ್ತಿ ಎನ್ನುವುದು ಪಕ್ಕಾ ಆಗುತ್ತದೆ.

ಗಂಭೀರ್ ಟೀಂ ಇಂಡಿಯಾ ಕೋಚ್ ಆದ ಬಳಿಕ ಎಲ್ಲರ ಜೊತೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಕೊಹ್ಲಿ, ರೋಹಿತ್ ಜೊತೆಗೆ ಉತ್ತಮ ಕ್ಷಣಗಳನ್ನು ಕಳೆದಿದ್ದಾರೆ. ಇದೀಗ ಟೀಂ ಇಂಡಿಯಾ ಮೈದಾನಕ್ಕೆ ತೆರಳಲು ಬಸ್ ಏರುವಾಗ ಎಲ್ಲರ ಕಾಲೆಳೆಯುವ ರೋಹಿತ್ ಕೋಚ್ ಗಂಭೀರ್ ರನ್ನೂ ಬಿಡುವುದಿಲ್ಲ. ಗಂಭೀರ್ ರನ್ನೂ ತಮ್ಮ ಶೈಲಿಯಲ್ಲಿ ಕಾಲೆಳೆಯುತ್ತಾ ನಗಿಸುತ್ತಾ ಇರುವುದನ್ನು ನೋಡಿ ನೆಟ್ಟಿಗರು ಇದು ರೋಹಿತ್ ಎಂದರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

KL Rahul: ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಕೆಎಲ್ ರಾಹುಲ್ ನಾಯಕನಾಗಬೇಕಾ ಶುಬ್ಮನ್ ಗಿಲ್ ಬೇಕಾ

IPL 2025: ಟೈಟನ್ಸ್‌ ವಿರುದ್ಧ ಡೆಲ್ಲಿಗೆ ಮುಖಭಂಗ: ಗುಜರಾತ್‌, ಆರ್‌ಸಿಬಿ, ಪಂಜಾಬ್‌ ತಂಡಗಳಿಗೆ ಪ್ಲೇಆಫ್‌ ಟಿಕೆಟ್‌

ಜೀವಬೆದರಿಕೆ ಬೆನ್ನಲ್ಲೇ ತಿರುಪತಿಗೆ ಟೀ ಇಂಡಿಯಾ ಕೋಚ್ ಭೇಟಿ, ಇಬ್ಬರು ಮಕ್ಕಳನ್ನು ಕೈಹಿಡಿದು ನಡೆದ ಗೌತಮ್ ಗಂಭೀರ್‌

ದೋಹಾ ಡೈಮಂಡ್‌ ಲೀಗ್‌ನಲ್ಲಿ ನೀರಜ್ ಚೋಪ್ರಾ ವಿರುದ್ಧ ಸ್ಪರ್ಧಿಸದ ಪಾಕ್‌ನ ಅರ್ಷದ್‌ ನದೀಮ್, ಕಾರಣ ಹೀಗಿದೆ

ಮುಂದಿನ ಸುದ್ದಿ
Show comments