ಜೊಹಾನ್ಸ್ ಬರ್ಗ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಶುಬ್ಮನ್ ಗಿಲ್ ಔಟಾಗಿದ್ದಕ್ಕೆ ಕೋಚ್ ದ್ರಾವಿಡ್ ನಾನ್ ಸ್ಟ್ರೈಕರ್ ಎಂಡ್ ನಲ್ಲಿದ್ದ ಯಶಸ್ವಿ ಜೈಸ್ವಾಲ್ ಮೇಲೆ ಸಿಟ್ಟಾದ ಘಟನೆ ನಡೆದಿದೆ.
ಗಿಲ್ 6 ಎಸೆತಗಳಿಂದ 8 ರನ್ ಗಳಿಸಿ ಉತ್ತಮ ಲಯದಲ್ಲಿದ್ದರು. ಈ ವೇಳೆ ಅವರ ವಿರುದ್ಧ ಎಲ್ ಬಿಡಬ್ಲ್ಯುಗೆ ಮನವಿ ಮಾಡಲಾಗಿತ್ತು. ಅಂಪಾಯರ್ ಅದನ್ನು ಪುರಸ್ಕರಿಸಿದರು ಕೂಡಾ. ಆದರೆ ಗಿಲ್ ತಕ್ಷಣವೇ ಜೈಸ್ವಾಲ್ ಕಡೆಗೆ ತಿರುಗಿ ಅಭಿಪ್ರಾಯ ಕೇಳಿದರು. ಜೈಸ್ವಾಲ್ ಜೊತೆ ಕ್ಷಣ ಹೊತ್ತು ಮಾತುಕತೆ ನಡೆಸಿದ ಗಿಲ್ ಡಿಆರ್ ಎಸ್ ತೆಗೆದುಕೊಳ್ಳದೇ ವಾಪಸಾದರು.
ಆದರೆ ರಿಪ್ಲೇನಲ್ಲಿ ನೋಡಿದಾಗ ಬಾಲ್ ಕೊಂಚ ಲೆಗ್ ಸ್ಟಂಪ್ ನಿಂದಾಚೆ ಹೋಗುತ್ತಿದ್ದುದು ಸ್ಪಷ್ಟವಾಗಿತ್ತು. ಹೀಗಾಗಿ ಒಂದು ವೇಳೆ ಡಿಆರ್ ಎಸ್ ತೆಗೆದುಕೊಂಡಿದ್ದರೆ ಗಿಲ್ ಬಚಾವ್ ಆಗುತ್ತಿದ್ದರು.
ಆದರೆ ಜೈಸ್ವಾಲ್ ಸರಿಯಾಗಿ ಸಲಹೆ ನೀಡದೇ ಇದ್ದಿದ್ದರಿಂದ ಕೋಚ್ ದ್ರಾವಿಡ್ ಮತ್ತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಅಸಮಾಧಾನಗೊಂಡರು. ಇಬ್ಬರೂ ಜೈಸ್ವಾಲ್ ಯಡವಟ್ಟಿಗೆ ಅಸಮಾಧಾನ ಹೊರಹಾಕಿದ್ದು ಟಿವಿ ಸ್ಕ್ರೀನ್ ನಲ್ಲಿ ಕಂಡುಬಂತು.