ಜೈಪುರ: ಟೀಂ ಇಂಡಿಯಾ ನೂತನ ಕೋಚ್ ಆಗಿ ಆಯ್ಕೆಯಾಗಿರುವ ಮಾಜಿ ನಾಯಕ ರಾಹುಲ್ ದ್ರಾವಿಡ್ ಬಗ್ಗೆ ನೂತನ ನಾಯಕ ರೋಹಿತ್ ಶರ್ಮಾ ಮಾತನಾಡಿದ್ದಾರೆ.
ದ್ರಾವಿಡ್ ನಾಯಕತ್ವದಲ್ಲಿ 2007 ರಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ರೋಹಿತ್ ಆ ಗಳಿಗೆಯನ್ನು ನಿನ್ನೆ ಸ್ಮರಿಸಿಕೊಂಡರು.
2007 ರಲ್ಲಿ ನಾನು ತಂಡಕ್ಕೆ ಆಯ್ಕೆಯಾದೆ. ಅದಕ್ಕೂ ಮೊದಲು ಬೆಂಗಳೂರಿನಲ್ಲಿ ಕ್ಯಾಂಪ್ ನಲ್ಲಿ ನಾನು ಅವರನ್ನು ಭೇಟಿಯಾಗಿದ್ದೆ. ಆಗ ನರ್ವಸ್ ಆಗಿದ್ದೆ. ಅದಾದ ಬಳಿಕ ಅವರ ನಾಯಕತ್ವದಲ್ಲಿ ಮೊದಲ ಬಾರಿಗೆ ಐರ್ಲೆಂಡ್ ನಲ್ಲಿ ಆಡುವ ಅವಕಾಶ ಸಿಕ್ಕಿತ್ತು. ನನ್ನ ಬಳಿ ಬಂದ ದ್ರಾವಿಡ್ ಸರ್ ನೀನು ಈ ಪಂದ್ಯದಲ್ಲಿ ಆಡಲಿರುವೆ ಎಂದಾಗ ನಾನು ಈ ನೆಲದ ಮೇಲೇ ಇರಲಿಲ್ಲ. ಅಷ್ಟು ಖುಷಿಯಾಗಿತ್ತು ಎಂದು ರೋಹಿತ್ ಹೇಳಿಕೊಂಡಿದ್ದಾರೆ. ವಿಶೇಷವೆಂದರೆ ಈಗ ಮತ್ತೆ ರೋಹಿತ್ ನಾಯಕರಾಗಿ ಆಯ್ಕೆಯಾದ ಬಳಿಕ ದ್ರಾವಿಡ್ ಕೋಚ್ ಆಗಿ ಜೊತೆಯಾಗಿ ಕೆಲಸ ಆರಂಭಿಸುತ್ತಿದ್ದಾರೆ.