Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೊಹ್ಲಿಯನ್ನು ರೋಹಿತ್ ಶರ್ಮಾ ಮಿಸ್ ಮಾಡಿಕೊಳ್ತಿರುವುದಕ್ಕೆ ಇದೇ ಸಾಕ್ಷಿ

Rohit Sharma

Krishnaveni K

ಹೈದರಾಬಾದ್ , ಸೋಮವಾರ, 29 ಜನವರಿ 2024 (08:21 IST)
ಹೈದರಾಬಾದ್: ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋತು ಮುಖಭಂಗ ಅನುಭವಿಸಿದ ಬಳಿಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕಿಂಗ್ ಕೊಹ್ಲಿ ಬಗ್ಗೆ ಮಾತನಾಡಿದ್ದಾರೆ.

ಪಂದ್ಯದ ಬಳಿಕ ಕಾಮೆಂಟೇಟರ್ ದಿನೇಶ್ ಕಾರ್ತಿಕ್ ಜೊತೆಗಿನ ಚಿಟ್ ಚ್ಯಾಟ್ ವೇಳೆ ರೋಹಿತ್ ಬೇಸರ ಹೊರಹಾಕಿದ್ದಾರೆ. ಜೊತೆಗೆ ವಿರಾಟ್ ಕೊಹ್ಲಿ ಫಿಟ್ನೆಸ್ ಬಗ್ಗೆ ಹಾಡಿ ಹೊಗಳಿದ್ದಾರೆ.

ರೋಹಿತ್ ಮತ್ತು ಕೊಹ್ಲಿ ಟೀಂ ಇಂಡಿಯಾದ ಜೋಡೆತ್ತುಗಳು. ಈ ಇಬ್ಬರು ದಿಗ್ಗಜರು ವಿಶ್ವಕಪ್ ನಲ್ಲಿ ಒಬ್ಬರಿಗೊಬ್ಬರು ಹೆಗಲುಕೊಟ್ಟು ಆಡುವ ಮೂಲಕ ತಂಡವನ್ನು ಫೈನಲ್ ತನಕ ಕೊಂಡೊಯ್ದಿದ್ದರು. ಇದೀಗ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಸೋತ ಬಳಿಕ ರೋಹಿತ್ ಗೆಳೆಯ ಕೊಹ್ಲಿಯನ್ನು ನೆನೆಸಿಕೊಂಡಿದ್ದಾರೆ.

‘ವಿರಾಟ್ ಕೊಹ್ಲಿ ತಮ್ಮ ಇಡೀ ವೃತ್ತಿ ಜೀವನದಲ್ಲಿ ಒಮ್ಮೆಯೂ ಎನ್ ಸಿಎಗೆ ಹೋದವರಲ್ಲ. ಅವರ ಫಿಟ್ನೆಸ್ ತಂಡದ ಯುವ ಆಟಗಾರರಿಗೆ ಮಾದರಿಯಾಗಬೇಕು. ಅವರ ಕವರ್ ಡ್ರೈವ್, ಫ್ಲಿಕ್ ನ ಗುಣಮಟ್ಟ ಒಂದು ಕಡೆಯಾದರೆ, ಅವರನ್ನು ಅಂತಹ ಗುಣಮಟ್ಟದ ಆಟಗಾರನಾಗಿ ಇಂದು ನೋಡಬೇಕಾದರೆ ಅವರ ಪರಿಶ್ರಮ ಗಮನಿಸಬೇಕು’ ಎಂದಿದ್ದಾರೆ.

ಕೊಹ್ಲಿಯನ್ನು ಸಾಕಷ್ಟು ಗಮನಿಸಿದ್ದೇನೆ
‘ವಿರಾಟ್ ಕೊಹ್ಲಿಯನ್ನು ಸಾಕಷ್ಟು ಗಮನಿಸಿದ್ದೇನೆ. ಅವರು ಮಾಡಿದ ಸಾಧನೆಗೆ ತೃಪ್ತಿಪಟ್ಟುಕೊಂಡು ಸುಮ್ಮನಿರಬಹುದು. ಅವರು ಇರುವ ಜಾಗದಲ್ಲಿ ಎರಡು-ಮೂರು ಸೀರೀಸ್ ಬಿಟ್ಟು ನಂತರ ಬರುತ್ತೇನೆ ಎನ್ನಬಹುದು. ಹಾಗಿದ್ದರೂ ಅವರಿಗೆ ತಂಡದಲ್ಲಿ ಸ್ಥಾನವಿರುತ್ತದೆ. ಆದರೆ ಗೆಲುವಿಗಾಗಿ ಅವರು ಪಡುವ ಹಪಹಪಿ ಮತ್ತು ಯಾವುದಕ್ಕೂ ರಾಜಿ ಮಾಡಿಕೊಳ್ಳದೇ ಪರಿಶ್ರಮ ಪಡುವ ಗುಣ ಕಲಿಸಿ ಬರುವಂತಹದ್ದಲ್ಲ. ಅದನ್ನು ನಾವು ಇತರರಿಂದ ನೋಡಿ ಕಲಿಯಬೇಕಾಗುತ್ತದೆ. ಅದು ಅವರೊಳಗೇ ಇರಬೇಕು. ಅದನ್ನು ಯಾರಿಗೂ ಕಲಿಸಿಕೊಡಲಾಗದು’ ಎಂದಿದ್ದಾರೆ.

ಕೌಟುಂಬಿಕ ಕಾರಣಗಳಿಂದಾಗಿ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಆದರೆ ರೋಹಿತ್ ಇಂದು ಆಡಿದ ಮಾತು ನೋಡಿದರೆ ಅವರೀಗ ಕೊಹ್ಲಿಯನ್ನು ಬಹಳ ಮಿಸ್ ಮಾಡಿಕೊಳ್ಳುವಂತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ವಿರುದ್ಧ ಐತಿಹಾಸಿಕ ಗೆಲುವು ದಾಖಲಿಸಿದ ಇಂಗ್ಲೆಂಡ್